Job Description: * ಪೋಕ್ಸೋ ಪ್ರಕರಣವೊಂದರಲ್ಲಿ ಸಂತ್ರಸ್ತೆಯನ್ನೇ ಮದುವೆಯಾಗಿದ್ದ ಆರೋಪಿಯ ವಿರುದ್ಧದ ಕೇಸ್ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಇದರಿಂದ ಸಮಾಜದ ಮೇಲೆ ಗಂಭೀರ ಪರಿಣಾಮ ಉಂಟಾಗಬಾರದೆಂದು ಅಭಿಪ್ರಾಯ ಪಟ್ಟಿದೆ. * ಪೋಕ್ಸೋ ಪ್ರಕರಣ ರದ್ದುಕೋರಿ ಆರೋಪಿ ಮತ್ತು ಆತನ ಪತ್ನಿ (ಸಂತ್ರಸ್ತೆ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಚ್. ಪಿ. ಸಂದೇಶ ಅವರಿದ್ದ ಪೀಠ ಗಂಭೀರ ಸ್ವರೂಪದ ಆರೋಪ ಕೃತ್ಯಗಳಲ್ಲಿ ಆರೋಪಿ ಹಾಗೂ ಸಂತ್ರಸ್ತರು ರಾಜಿಯಾದ ಮಾತ್ರಕ್ಕೆ ಪ್ರಕ್ರಣವನ್ನು ರದ್ದು ಪಡಿಸಲು ಸಾಧ್ಯವಿಲ್ಲ. ಒಂದೊಮ್ಮೆ ಪ್ರಕರಣವನ್ನು ರದ್ದುಪಡಿಸಿದರೆ ಅದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿ ಪ್ರಕರಣವನ್ನು ವಜಾಗೊಳಿಸಿದೆ.