Job Description: * ಪ್ರಧಾನಿ ಮೋದಿಯವರು ಆಗಸ್ಟ್ 15 , 2023 ರೊಳಗೆ 75 ಶಾಲೆಗಳಿಗೆ ಭೇಟಿ ನೀಡಬೇಕೆಂದು ಟೋಕಿಯೋ ಒಲಂಪಿಕ್ಸ್ ನಲ್ಲಿ ಅಮೋಘ ಸಾಧನೆ ತೋರಿದ 75 ಸ್ಟಾರ್ ಕ್ರೀಡಾ ಪಟುಗಳಿಗೆ ಮನವಿ ಮಾಡಿಕೊಂಡಿದ್ದರು. * ಮುಂದಿನ 2 ವರ್ಷಗಳಲ್ಲಿ 'ಫಿಟ್ ಇಂಡಿಯಾ ಮಿಷನ್' ಅಭಿಯಾನದ ವ್ಯಾಪ್ತಿಯಡಿಯಲ್ಲಿ 75 ಸ್ಟಾರ್ ಕ್ರೀಡಾ ಪಟುಗಳು ಶಾಲೆಗಳಿಗೆ ಭೇಟಿ ನೀಡಲಿದ್ದಾರೆ. * ಕ್ರೀಡಾ ಸಾಧಕರು 'ಫಿಟ್ ಇಂಡಿಯಾ ಮಿಷನ್' ಅಭಿಯಾನದಲ್ಲಿ ಸುಮಾರು 1 ಘಂಟೆಯವರೆಗೂ ತಾವು ಶಾಲಾ ಮಕ್ಕಳೊಂದಿಗೆ ಬೆರೆತು ಕ್ರೀಡಾ ಸ್ಫೂರ್ತಿ, ಅಪೌಷ್ಟಿಕತೆಯ ಜಾಗೃತಿ ಕುರಿತು ತಿಳುವಳಿಕೆ ಹಾಗೂ ಫಿಟ್ ಇಂಡಿಯಾ ಕ್ವಿಜ್ ನಲ್ಲಿಯೂ ಭಾಗವಹಿಸಲಿದ್ದಾರೆ.