Job Description: * 'ಭಾರತೀಯ ಫುಟ್ಬಾಲ್ನ ಧ್ವನಿ' ಎಂದು ಕರೆಯಲ್ಪಡುವ ಅನುಭವಿ ಕ್ರೀಡಾ ನಿರೂಪಕರಾದ ನೋವಿ ಕಪಾಡಿಯಾ ಅವರು ದಿನಾಂಕ : 18-11-2021 ರಂದು ತಮ್ಮ 68 ನೇ ವಯಸ್ಸಿನಲ್ಲಿ ನಿಧನರಾದರು. * ನೋವಿ ಕಪಾಡಿಯಾ ಅವರು ನ್ಯೂರಾನ್ ಕಾಯಿಲೆಯಿಂದ ಬಳಲುತ್ತಿದ್ದರು, ಬೆನ್ನುಮೂಳೆ ಮತ್ತು ಮೆದುಳಿನ ನರಗಳು ಕಾಲಾನಂತರದಲ್ಲಿ ಕಾರ್ಯವನ್ನು ಕಳೆದುಕೊಳ್ಳುವ ಒಂದು ಅಪರೂಪದ ಕಾಯಿಲೆಗೆ ತುತ್ತಾಗಿದ್ದರು, ಕಳೆದ 02 ವರ್ಷಗಳಿಂದ ಗಾಲಿಕುರ್ಚಿಯ ಮೇಲೆ ಕುಳಿತಿದ್ದ ನೋವಿ ಕಪಾಡಿಯಾ ಅವರು ಕಳೆದ 01 ತಿಂಗಳಿನಿಂದ ವೆಂಟಿಲೇಟರ್ನಲ್ಲಿದ್ದರು. * ನೋವಿ ಕಪಾಡಿಯಾ ಅವರು 10 ವರ್ಷಗಳ ಕಾಲ ಭಾರತೀಯ ಫುಟ್ಬಾಲ್ ಪಂದ್ಯಾವಳಿಗಳಿಗೆ ವಿವರಣೆಯನ್ನು ನೀಡುವುದರ ಜೊತೆಗೆ, ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್ಗೆ ಕಾಮೆಂಟರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.