Job Description: * ಕನ್ನಡ ಪಂಡಿತ ಮತ್ತು ಖ್ಯಾತ ಕೊಂಕಣಿ ಸಾಹಿತಿ ಮಂದರ್ಕೆ ಮಾಧವ ಪೈ ಅವರು ಬುಧವಾರ ಕಾಣದ ಕಾಲಚಕ್ರದಲ್ಲಿ ಮಾಯವಾಗಿದ್ದಾರೆ. * ಮದ್ರಾಸ ವಿಶ್ವವಿದ್ಯಾಲಯದಿಂದ 1955 ರಲ್ಲಿ ಕನ್ನಡ ಎಂಎ ಪದವಿ, ಮೈಸೂರು ವಿವಿ ಹಾಗೂ ಅಲಹಾಬಾದ್ ಹಿಂದಿ ವಿದ್ಯಾಲಯದಿಂದ ಹಿಂದಿ ಸಾಹಿತ್ಯ ರತ್ನ ಮತ್ತು ರಾಷ್ಟ್ರ ಭಾಷಾ ಪ್ರವೀಣ ಪ್ರಶಸ್ತಿ ಪಡೆದಿದ್ದರು. * ಮಾಧವ ಪೈ ಅವರು ಕನ್ನಡ ಮತ್ತು ಕೊಂಕಣಿ ನಿಘಂಟನ್ನು ರಚಿಸಿದ್ದರು. ಮಾಧವ ಪೈ ಅವರು ಅನೇಕ ಸಂಶೋಧನಾ ಲೇಖನ ಪ್ರಕಟಿಸಿದ್ದಾರೆ. * ಕೊಂಕಣಿ ಶಬ್ದ ರತ್ನಾಕರ ಎಂದೇ ಹೆಸರು ಪಡೆದ ಮಂದರ್ಕೆ ಮಾಧವ ಪೈ ಅವರು ಅಖಿಲ ಭಾರತ ಮತ್ತು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು.