Job Description: * ವಿಶ್ವದ ಅತಿ ಹೆಚ್ಚಿನ ಶ್ರೀಮಂತ ದೇಶಗಳ ಸಾಲಿನಲ್ಲಿ ಅಮೆರಿಕಕ್ಕಿಂತ ಚೀನಾ ನಂ.1 ಶ್ರೀಮಂತ ದೇಶವಾಗಿದೆ. * ಮೈಕ್ಕಿನ್ಸೆಯ್ ಅಂಡ್ ಕಂಪನಿ (McKinsey & Company)ಯ ಸಂಶೋಧನಾ ವಿಭಾಗದ ವರದಿ ಅನ್ವಯ ಜಾಗತಿಕ ಸಂಪತ್ತು ಮೂರೂ ಪಟ್ಟು ಗರಿಷ್ಠವಾಗಿದೆ. * ಮೈಕ್ಕಿನ್ಸೆಯ್ ಅಂಡ್ ಕಂಪನಿ (McKinsey & Company)ಯ ಸಂಶೋಧನಾ ವಿಭಾಗದ ವರದಿಯು 10 ರಾಷ್ಟ್ರಗಳ ಬ್ಯಾಲನ್ಸಶೀಟ್ ಸಿದ್ಧಪಡಿಸಿದ್ದು, ವಿಶ್ವದ ಆದಾಯದಲ್ಲಿ 60 % ಈ 10 ರಾಷ್ಟ್ರಗಳಲ್ಲಿ ಹಂಚಿಕೆಯಾಗಿದೆ ಎಂಬ ಅಂಶವು ವಿಶೇಷವಾಗಿದೆ. * ಪ್ರಸ್ತುತ ಮಾಹಿತಿ ಪ್ರಕಾರ ಜಗತ್ತಿನಲ್ಲಿ ಸಂಪತ್ತು ಶೇಖರಣೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೇ ಹೆಚ್ಚು, ವಿಶ್ವದ ಸಂಪತ್ತಿನ 68 % ರಿಯಲ್ ಎಸ್ಟೇಟ್ ಮೇಲೆ ಹೂಡಿಕೆಯಾಗಿದೆ. * ಭಾರತದ ಒಟ್ಟಾರೆ ಆರ್ಥಿಕತೆ ಪ್ರಸ್ತುತ 3 ಟ್ರೇಲಿಯನ್ ಡಾಲರ್ ಅಂದರೆ 2234 ಲಕ್ಷ ಕೋಟಿ ರೂಪಾಯಿ ಇದೆ. ಇದನ್ನು 5 ಟ್ರೇಲಿಯನ್ ಡಾಲರ್ (3724 ಲಕ್ಷ ಕೋಟಿ ರೂಪಾಯಿ)ಗೆ ಹೆಚ್ಚಿಸಲು ಸರ್ಕಾರವು ಬಯಸಿದೆ.