Job Description: * ಕೇಂದ್ರ ಸರ್ಕಾರ ಎಲ್ಲ ಭಾರತೀಯ ಭಾಷೆಗಳ ಉನ್ನತಿಗಾಗಿ ಸೋಮವಾರದಂದು ರಚಿಸಿರುವ ಭಾಷಾ ಉನ್ನತಾಧಿಕಾರ ಸಮಿತಿ ಅಧ್ಯಕ್ಷರನ್ನಾಗಿ ಕನ್ನಡಿಗ, ಸಂಸ್ಕೃತ ವಿದ್ವಾಂಸ ಚಮೂ ಕೃಷ್ಣ ಶಾಸ್ತ್ರೀ ಅವರನ್ನು ನೇಮಕ ಮಾಡಿದೆ. * ಪ್ರಸ್ತುತ ತಮಿಳುನಾಡಿನ ತಂಜಾವೂರಿನಲ್ಲಿರುವ ಕೃಷ್ಣ ಶಾಸ್ತ್ರೀಯವರು ದಕ್ಷಿಣ ಜಿಲ್ಲೆಯ ಬಂಟ್ವಳ ತಾಲ್ಲೂಕಿನ ಕೆದಿಲದವರಾಗಿದ್ದಾರೆ. * ಚಮೂ ಕೃಷ್ಣ ಶಾಸ್ತ್ರೀಯವರು ಶಿಕ್ಷಣ ತಜ್ಞರಾಗಿದ್ದು ಸಂಸ್ಕೃತ ಸಂವರ್ಧನೆಗಾಗಿ 'ಸಂಸ್ಕೃತ ಸಂವರ್ಧನಾ ಪ್ರತಿಷ್ಠಾನ' ಸ್ಥಾಪಿಸಿದ್ದಾರೆ. *ಅಪಾಯದ ಅಂಚಿನಲ್ಲಿರುವ ಭಾಷೆಗಳು, ಸಂವಿಧಾನದ 8 ನೇ ಪರಿಚ್ಚೇದದಲ್ಲಿರುವ ಭಾಷೆಗಳಲ್ಲದೆ, ಪರಿಚ್ಚೇದದಲ್ಲಿ ಇಲ್ಲದ ಭಾಷೆಗಳು, ಅಲ್ಪಸಂಖ್ಯಾತ, ಬುಡಕಟ್ಟು ಮತ್ತು ಶಾಸ್ತ್ರೀಯ ನ್ಹಷೆಗಳ ಕುರಿತಾಗಿ ಅಧ್ಯಯನ ನಡೆಸಿ, ಅವುಗಳ ಉನ್ನತಿಗಾಗಿ ಕೆಲಸ ಮಾಡಲು ಭಾಷಾ ಉನ್ನತಾಧಿಕಾರ ಸಮಿತಿಯನ್ನು ಕೇಂದ್ರವು ರಚಿಸಿದೆ.