Job Description: * ಭಾರತದ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಸದಸ್ಯ ಪ್ರಾಧ್ಯಾಪಕ ಮತ್ತು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಮಲ್ ಪಟೇಲ್ ಅವರು ಅಂತರಾಷ್ಟ್ರೀಯ ಕಾನೂನು ಆಯೋಗದ ಸದಸ್ಯರಾಗಿ ನೇಮಕವಾಗಿದ್ದಾರೆ. * 8 ಸ್ಥಾನಗಳಿಗೆ ವಿಶ್ವಸಂಸ್ಥೆಯಲ್ಲಿ ನಡೆದ ಚುಣಾವಣಾ ಸ್ಪರ್ಧೆಯಲ್ಲಿ ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ಸಮೂಹದಿಂದ 11 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. * ಏಷ್ಯಾ ಪೆಸಿಫಿಕ್ ಸಮೂಹದಲ್ಲಿರುವ ಜಪಾನ, ಚೀನಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ 192 ರಾಷ್ಟ್ರಗಳ ಸದಸ್ಯರು ಮತದಾನ ಮಾಡಿದರು. ಈ ಮತದಾನದಲ್ಲಿ 51 ವಯಸ್ಸಿನ ಪ್ರೊ. ವಿಮಲ್ ಅವರು 163 ಮತ ಪಡೆದರು. *ಪ್ರೊ. ವಿಮಲ್ ಅವರು 163 ಮತ ಪಡೆದು ಮೊದಲಿಗರಾದರೆ ನಂತರದ ಸ್ಥಾನದಲ್ಲಿ ಥಾಯ್ಲ್ಯಾಂಡ್ 162 , ಜಪಾನ 154 , ವಿಯೆಟ್ನಾಮ್ 145 ಮತ ಪಡೆದರು. * ವಿಶ್ವ ಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಟಿ. ಎಸ್. ತಿರುಮೂರ್ತಿ ಅವರು ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ಸಮೂಹದಲ್ಲಿ ಅಗ್ರಸ್ಥಾನ ಪಡೆದ ಪ್ರೊ. ವಿಮಲ್ ಪಟೇಲ್ ಅವರಿಗೆ ಅಭಿನಂದನೆಯನ್ನು ಹಾಗೂ ಪಟೇಲ್ ಅವರನ್ನು ಬೆಂಬಲಿಸಿದ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.