Job Description: ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಇದೀಗ ಭಾರತೀಯ ಸೇನೆಯು 11 ಮಹಿಳಾ ಅಧಿಕಾರಿಗಳಿಗೆ 10 ದಿನಗಳೊಳಗೆ ಶಾಶ್ವತ ಆಯೋಗ(ಪಿಸಿ) ಮಂಜೂರು ಮಾಡಲು ಒಪ್ಪಿಗೆ ನೀಡಿದೆ. ಇತ್ತೀಚಿಗೆ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ಪೀಠವು 11 ಮಹಿಳಾ ಅಧಿಕಾರಿಗಳಿಗೆ 10 ದಿನಗಳ ಅವಧಿಯಲ್ಲಿ ಶಾಶ್ವತ ಆಯೋಗ ರಚಿಸುವಂತೆ ಆದೇಶ ನೀಡಿದ್ದ ಹಿನ್ನಲೆ ಶಾಶ್ವತ ಆಯೋಗ ಮಂಜೂರು ಮಾಡಲಾಗುವುದು ಎಂದು ಸೇನೆ ತಿಳಿಸಿದೆ.