Job Description: ಪ್ರಸ್ತುತ ರಷ್ಯಾ ಅಧ್ಯಕ್ಷರಾಗಿರುವ ವ್ಲಾದಿಮಿರ್ ಪುಟಿನ್ ಅವರು ಬರುವ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ಒಂದು ದಿನದ ಈ ಭೇಟಿ ವೇಳೆಯಲ್ಲಿ ವಿವಿಧ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. * ಭಾರತ ಮತ್ತು ರಷ್ಯಾ ನಡುವಿನ ವಾರ್ಷಿಕ ಶೃಂಗಸಭೆಗಾಗಿ ವ್ಲಾದಿಮಿರ್ ಪುಟಿನ್ ಡಿಸೆಂಬರ್ 6 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. * ಈ ಮೊದಲು ವ್ಲಾದಿಮಿರ್ ಪುಟಿನ್ 2018ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು, ಆದರೆ ಕಳೆದ ವರ್ಷ ಕೋವಿಡ್ ಹಿನ್ನಲೆಯಲ್ಲಿ ಈ ಶೃಂಗ ಸಭೆ ಮುಂದೂಡಲಾಗಿತ್ತು. * ಭಾರತವು ರಷ್ಯಾ ಮತ್ತು ಜಪಾನ್ ರಾಷ್ಟ್ರಗಳೊಂದಿಗೆ ಇಂತಹ ವಾರ್ಷಿಕ ಶೃಂಗ ಸಭೆಗಳನ್ನು ನಡೆಸುತ್ತ ಬಂದಿದೆ. * ಇಲ್ಲಿಯವರೆಗೆ ಒಟ್ಟು 20 ಪರ್ಯಾಯ ವಾರ್ಷಿಕ ಶೃಂಗ ಸಭೆಗಳು ಭಾರತ ಮತ್ತು ರಷ್ಯಾದಲ್ಲಿ ನಡೆದಿವೆ. * ಇನ್ನು ಈ ಭೇಟಿಯ ವೇಳೆ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು ಸೇರಿ ಹಲವು ಮಾತುಕತೆಗಳು ನಡೆಯುವ ನಿರೀಕ್ಷೆ ಇದೆ.