Job Description: ಗೋವಾದಲ್ಲಿ ನಡೆಯಲಿರುವ 52ನೆಯ ಅಂತರರಾಷ್ಟ್ರೀಯ ಸಿನಿಮಾ ಉತ್ಸವ ಭಾರತಕ್ಕೆ ಈ ಸಲ ಅಂತರರಾಷ್ಟ್ರೀಯ ಸಿನಿಮಾಗಳ ಸ್ಪರ್ಧೆಗೆ ಒಟ್ಟು ಹದಿನೈದು ಸಿನಿಮಾಗಳು ಅಂತಿಮ ಸಾಲಿನಲ್ಲಿ ಪ್ರವೇಶ ಪಡೆದಿವೆ. ಈ ಉತ್ಸವದ ಸಂದರ್ಭದಲ್ಲಿ ಪ್ರದರ್ಶಿಸಲ್ಪಡುವ ಈ ಚಿತ್ರಗಳನ್ನು ಅಂತರರಾಷ್ಟ್ರೀಯ ವಿಭಾಗಕ್ಕೆ ಪರಿಗಣಿಸಲಾಗುತ್ತದೆ. ಈ ಚಿತ್ರಗಳು ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿದ್ದು, ಅತ್ಯುತ್ತಮ ಚಿತ್ರಗಳ ಗುಂಪಿಗೆ ಸೇರಿದ್ದು, ಸುವರ್ಣ ಮಯೂರ ಮತ್ತಿತರ ಪ್ರಶಸ್ತಿಗಳಿಗೆ ಸ್ಪರ್ಧೆ ಒಡ್ಡಲಿವೆ. ಈ ವಿಭಾಗದಲ್ಲಿರುವ ಸಿನಮಾಗಳ ಪಟ್ಟಿ : ಚಿತ್ರ, ನಿರ್ದೇಶಕ, ಭಾಷೆ/ ದೇಶ 1. ಎನಿ ಡೇ ನೌ; ನಿರ್ದೇಶನ: ಹ್ಯಾಮಿ ರಾಮೆಝನ್; ಫಿನ್ಲ್ಯಾಂಡ್ 2 ಚಾರ್ಲೆಟ್; ನಿರ್ದೇಶನ; ಪರುಗ್ವೆ... 3. ಗೋದಾವರಿ; ನಿ: ನಿಖಿಲ್ ಮಹಾಜನ್; ಮರಾಠಿ, ಭಾರತ 4. ಇಂಟ್ರೆಗೇಡ್; ನಿ: ರಾದು ಮೌಂಟೀನ್; ರೋಮಾನಿಯಾ 5. ಲ್ಯಾಂಡ್ ಆಫ್ ಡ್ರೀಮ್ಸ್; ನಿ: ಶಿರೀನ್ ನಿಶಾತ್, ಶೋಜಾ ಅಜಾರಿ; ನ್ಯು ಮೆಕ್ಸಿಕೊ, ಅಮೆರಿಕಾ 6. ಲೀಡರ್; ನಿ: ಕಟಿಯಾ ಪ್ರಿವೆಜೆಂಕವ್; ಪೋಲೆಂಡ್ 7. ಮಿ ವಸಂತರಾವ್; ನಿ: ನಿಪುಮ್ ಅವಿನಾಶ್ ಧರ್ಮಾಧಿಕಾರಿ; ಮರಾಠಿ, ಭಾರತ 8. ಮಾಸ್ಕೊ ಡಸ್ ನಾಟ್ ಹ್ಯಾಪ್ಪನ್: ನಿ: ದಿಮಿತ್ರಿ ಫೆದ್ರೊ; ರಷ್ಯಾ 9. ನೋ ಗ್ರೌಂಡ್ ಬೆನೆತ್ ದ ಫೀಟ್; ನಿ: ಮೊಹ್ಮದ್ ರಾಬ್ಬಿ ಮೃಧಾ; ಬಾಂಗ್ಲಾದೇಶ್ 10. ಒನ್ಸ್ ವಿ ವೇರ್ ಗುಡ್ ಫಾರ್ ಯು; ನಿ: ಬ್ರಾಂಕೊ ಸೆಮಿತ್; ಕ್ರೋಷಿಯಾ, ಬೋಸ್ನಿಯಾ, ಹಾರ್ಜೆಗೊವಿನಾ 11. ರಿಂಗ್ ವಾಂಡರಿಂಗ್; ನಿ: ಮಸಾಕಾಝು ಕನೆಕೊ; ಜಪಾನ್ 12. ಸೇವಿಂಗ್ ಒನ್ ಹು ವಾಸ್ ಡೆಡ್; ನಿ:ವಕ್ಲಾವ್ ಕದ್ರಂಕಾ; ಸಿಜೆಕ್ ರಿಪಬ್ಲಿಕ್ 13. ಸೆಮ್ಖೋರ್; ನಿಳ ಆಮೀ ಬುರಾ; ಡಿಮಸಾ, ಭಾರತ 14. ದ ಡಾರ್ಮ್; ನಿ: ರೋಮನ್ ವಾಸಿನೋವ್; ರಷಿಯಾ 15. ದ ಫಸ್ಟ್ ಫಾಲನ್; ನಿ: ರೋಡ್ರಿಗೊ ಡಿ ಒಲಿವೆರಾ; ಬ್ರಾಝಿಲ್