Job Description: * ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಸರಿ ಸುಮಾರು 20 ಮಹಿಳಾ ಕೆಡೆಟ್ಗಳಿಗೆ ಮುಂದಿನ ವರ್ಷ ಪ್ರವೇಶ ನೀಡಲಿದೆ, ಇದೇ ಮೊದಲ ಬಾರಿಗೆ ಪ್ರಧಾನ ತ್ರಿ-ಸೇವಾ ಮಿಲಿಟರಿ ತರಬೇತಿ ಸಂಸ್ಥೆಯಲ್ಲಿ ಇವರನ್ನು ತರಬೇತಿಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದೆ. * ಈ 20 ಮಹಿಳಾ ಕೆಡೆಟ್ಗಳಲ್ಲಿ ಭಾರತೀಯ ಸೇನೆಯು ಸುಮಾರು 10 ಮಹಿಳಾ ಅಧಿಕಾರಿಗಳನ್ನು ಒಳಗೊಂಡಿದೆ, ಹಾಗೂ ಭಾರತೀಯ ವಾಯುಪಡೆಯ 05 ಮಹಿಳಾ ಅಧಿಕಾರಿಗಳು, ಹಾಗೂ ಭಾರತೀಯ ನೌಕಾಪಡೆಯು 05 ಮಹಿಳಾ ಅಧಿಕಾರಿಗಳನ್ನು ಒಳಗೊಂಡಿದೆ. * ಇದೀಗ ಈ ಮಹಿಳಾ ಕೆಡೆಟ್ಗಳಿಗೆ ಮೊದಲ ಬಾರಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. * ಈ ಹಿಂದೆ 1955 ರಲ್ಲಿ ಪುಣೆಯ ಖಡಕ್ವಾಸ್ಲಾದಲ್ಲಿ ಈ ಎನ್ಡಿಎ(NDA) ಉದ್ಘಾಟನೆಗೊಂಡಿದೆ. * ಇಲ್ಲಿನ ಕೆಡೆಟ್ಗಳು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳ ನಂತರ ತಮ್ಮ ಪೂರ್ವ-ಕಮಿಷನಿಂಗ್ ತರಬೇತಿಗಾಗಿ NDA'ಗೆ ಸೇರಿಕೊಳ್ಳುತ್ತಾರೆ, ಇದೇ ವರ್ಷ 2ಲಕ್ಷಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳು NDA ಪರೀಕ್ಷೆಗೆ ಹಾಜರಾಗಲು ತಮ್ಮ ಅರ್ಜಿಯನ್ನು ಹಾಕಿದ್ದರು. * ಈ ಹಿಂದೆ ಸುಪ್ರೀಂ ಕೋರ್ಟ್ ಇದೇ ವರ್ಷದಿಂದ ಮಹಿಳೆಯರನ್ನು NDAಗೆ ಸೇರಿಸಿಕೊಳ್ಳಬೇಕು ಎಂದು ತೀರ್ಪು ನೀಡಿದೆ.