Job Description: ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ರಿಸರ್ವ್ ಬ್ಯಾಂಕ್ನ(ಆರ್ಬಿಐ) ಎರಡು ನವೀನ ಗ್ರಾಹಕ ಕೇಂದ್ರಿತ ಉಪಕ್ರಮಗಳಾದ ʻರೀಟೇಲ್ ಡೈರೆಕ್ಟ್ ಸ್ಕೀಮ್ʼ ಮತ್ತು ʻರಿಸರ್ವ್ ಬ್ಯಾಂಕ್ – ಸಮಗ್ರ ಒಂಬುಡ್ಸ್ಮನ್ ಸ್ಕೀಮ್ʼಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಇತ್ತೀಚಿಗೆ ಚಾಲನೆ ನೀಡಿದರು. ಈ ಯೋಜನೆಗಳು ದೇಶದಲ್ಲಿ ಹೂಡಿಕೆಯ ವ್ಯಾಪ್ತಿಯನ್ನು ವಿಸ್ತರಿಸುತ್ತವೆ ಮತ್ತು ಬಂಡವಾಳ ಮಾರುಕಟ್ಟೆಗಳ ಪ್ರವೇಶವನ್ನು ಸುಲಭಗೊಳಿಸುತ್ತವೆ, ಜೊತೆಗೆ ಇವು ಹೂಡಿಕೆದಾರರಿಗೆ ಹೆಚ್ಚು ಸುರಕ್ಷಿತವಾಗಿವೆ ಎಂದು ಪ್ರಧಾನಿ ಹೇಳಿದರು. ʻರೀಟೇಲ್ ಡೈರೆಕ್ಟ್ ಸ್ಕೀಮ್ʼ ದೇಶದ ಸಣ್ಣ ಹೂಡಿಕೆದಾರರಿಗೆ ಸರಕಾರಿ ಭದ್ರತಾಪತ್ರಗಳಲ್ಲಿ ಸರಳ ಮತ್ತು ಸುರಕ್ಷಿತ ಹೂಡಿಕೆಯ ಮಾಧ್ಯಮವನ್ನು ಒದಗಿಸುತ್ತದೆ. ಅದೇ ರೀತಿ, ಇಂದು ʻಸಮಗ್ರ ಒಂಬುಡ್ಸ್ಮನ್ ಯೋಜನೆʼಯೊಂದಿಗೆ ಬ್ಯಾಂಕಿಂಗ್ ವಲಯದಲ್ಲಿ ʻಒಂದು ರಾಷ್ಟ್ರ, ಒಂದು ಒಂಬುಡ್ಸ್ಮನ್ ವ್ಯವಸ್ಥೆʼ ರೂಪುಗೊಂಡಿದೆ ಎಂದು ಅವರು ಹೇಳಿದರು.