Job Description: * ಪ್ರಸ್ತುತ ಕೇಂದ್ರ ಸಚಿವ ಸಂಪುಟವು 2014-15 ರಿಂದ 2020-21ರ ವರೆಗಿನ ಹತ್ತಿ ಋತುಗಳಲ್ಲಿ ಭಾರತೀಯ ಕಾಟನ್ ಕಾರ್ಪೊರೇಷನ್'ಗೆ 17,408.85 ಕೋಟಿ ರೂ.ಗಳ ಬೆಂಬಲ ಬೆಲೆ ನೀಡಲು ಅನುಮೋದನೆ ನೀಡಿದೆ. * ಕೇಂದ್ರ ಸಚಿವ ಸಂಪುಟವು ಹತ್ತಿ ಋತುವಿನಲ್ಲಿ ಹತ್ತಿಗೆ ಎಂಎಸ್ಪಿ ಆಪ್ʼಗಳ ಅಡಿಯಲ್ಲಿನ ನಷ್ಟವನ್ನು ಭರಿಸಲು ಭಾರತೀಯ ಕಾಟನ್ ಕಾರ್ಪೊರೇಷನ್'ಗೆ 17,408.85 ಕೋಟಿ ರೂ.ಗಳ ಬೆಂಬಲ ಬೆಲೆ ನೀಡಲು ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ತಿಳಿಸಿದ್ದಾರೆ. * ಇದೀಗ ಕೇಂದ್ರ ಸಚಿವ ಸಂಪುಟವು 2020-21ರ ವಿವಿಧ ಕಬ್ಬು ಆಧಾರಿತ ಕಚ್ಚಾ ವಸ್ತುಗಳಿಂದ ಪಡೆದಿರುವ ಎಥೆನಾಲ್ ಬೆಲೆಗಳನ್ನ ಹೆಚ್ಚಿಸಲು ನಿರ್ಧಾರವನ್ನು ಕೈಗೊಂಡಿದೆ. * ಈ ಎಥೆನಾಲ್ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಎಥೆನಾಲ್ ಖರೀದಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ತಿಳಿಸಿದ್ದಾರೆ. * ಪ್ರಸ್ತುತ ಸಿ ಹೆವಿ ಕಾಕಂಬಿಯಿಂದ ಪಡೆದ ಎಥೆನಾಲ್ ಬೆಲೆಯನ್ನು ಪ್ರತಿ ಲೀಟರ್ʼಗೆ 45.69 ರೂ.ಗಳಿಂದ 46.66 ರೂ.ಗೆ ಹೆಚ್ಚಿಸಲಾಗಿದೆ. * ಬಿ ಹೆವಿ ಕಾಕಂಬಿಯಿಂದ ಪಡೆದ ಎಥೆನಾಲ್ ಬೆಲೆಯನ್ನು ಪ್ರತಿ ಲೀಟರ್ʼಗೆ 57.61 ರೂ.ಗಳಿಂದ 59.04 ರೂ.ಗೆ ಏರಿಕೆಮಾಡಲಾಗಿದೆ. * ಇದಷ್ಟೇ ಅಲ್ಲದೇ ಕಬ್ಬಿನ ರಸ ಅಥವಾ ಸಕ್ಕರೆಯಿಂದ ಪಡೆದಿರುವ ಎಥೆನಾಲ್ ಬೆಲೆಯನ್ನು ಪ್ರತಿ ಲೀಟರ್ʼಗೆ 62.65ರೂ.ಗಳಿಂದ 63.45ರೂ.ಗೆ ಏರಿಕೆಮಾಡಲಾಗಿದೆ ಎಂದು ತಿಳಿಸಿದ್ದಾರೆ.