Job Description: * ಪ್ರಸ್ತುತ ವಿಶ್ವಾದ್ಯಂತ '96 ದೇಶ'ಗಳು ಭಾರತದ ಜೊತೆಗೆ ಲಸಿಕೆ ಪ್ರಮಾಣಪತ್ರಗಳನ್ನು ಪರಸ್ಪರ ಸ್ವೀಕಾರ ಮಾಡಿಕೊಳ್ಳಲು ಸಮ್ಮತಿಯನ್ನು ನೀಡಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯಾ ಅವರು ಹೇಳಿಕೆ ನೀಡಿದ್ದಾರೆ. * ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಕೇಂದ್ರ ಸರ್ಕಾರವು ವಿಶ್ವದ ಬೇರೆ ಬೇರೆ ಭಾಗಗಳೊಂದಿಗೆ ಸಂವಹನದಲ್ಲಿ ಸಂವಾದವನ್ನು ನಡೆಸುತ್ತಿದೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರು ತಿಳಿಸಿದ್ದಾರೆ. * ಇದೀಗ ವಿಶ್ವದ ಅತಿದೊಡ್ಡ ಕೋವಿಡ್-19 ಲಸಿಕೆ ಕಾರ್ಯಕ್ರಮದ ಮೂಲಕ ಫಲಾನುಭವಿಗಳನ್ನ ಅಂಗೀಕರಿಸಲಾಗುತ್ತದೆ, ಆ ಮೂಲಕ ಶಿಕ್ಷಣ, ವ್ಯಾಪಾರ ಮತ್ತು ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಪ್ರಯಾಣವನ್ನು ಬೆಳೆಸಲು ಸಾರ್ವಜನಿಕರಿಗೆ ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಭಾರತ ದೇಶದಲ್ಲಿ ಇಲ್ಲಿಯವರೆಗೆ 109 ಕೋಟಿ ಡೋಸ್ʼಗಳನ್ನು ಜನರಿಗೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದಾರೆ, ಅಷ್ಟೇ ಅಲ್ಲದೇ 'ಹರ್ ಘರ್ ದಸ್ತಕ್' ಯೋಜನೆ ಅಡಿಯಲ್ಲಿ ಆರೋಗ್ಯ ಕಾರ್ಯಕರ್ತರು ಲಸಿಕೆ ಅಭಿಯಾನವನ್ನ ನಡೆಸಲು ಎಲ್ಲಾ ಮನೆಗಳಿಗೆ ತೆರಳುತ್ತಿದ್ದಾರೆ. * ಇದೀಗ ಕೊವಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯನ್ನು '96 ದೇಶ'ಗಳು ಗುರುತಿಸಿವೆ ಎಂದು ತಿಳಿಸಲಾಗಿದೆ.