Job Description: * ಇದೀಗ ಜಲಾಂತರ್ಗಾಮಿ 'ಐಎನ್ಎಸ್ ವೇಲಾ'ವನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದೆ, ಈ ಜಲಾಂತರ್ಗಾಮಿಯು ಮಜಗಾಂವ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ ಅಡಿಯಲ್ಲಿ ನಿರ್ಮಿಸಲಾಗಿದೆ, ಅಷ್ಟೇ ಅಲ್ಲದೇ ಇದು 'ಸ್ಕಾರ್ಪಿಯಾನ್' ಸರಣಿಯ 4 ನೇ ಜಲಾಂತರ್ಗಾಮಿ ನೌಕೆ ಇದಾಗಿದೆ. * ಪ್ರಸ್ತುತ 'ಆತ್ಮನಿರ್ಭರ ಭಾರತ' ಮತ್ತು 'ಮೇಕ್ ಇನ್ ಇಂಡಿಯಾ'ದ ಮಹತ್ವಾಕಾಂಕ್ಷೆಯ ಯೋಜನೆಗ ಅಡಿಯಲ್ಲಿ ಈ ಜಲಾಂತರ್ಗಾಮಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. * ಈಗಾಗಲೇ ಭಾರತೀಯ ನೌಕಾ ಪಡೆಗೆ ಐಎನ್ಎಸ್(INS) ಕಲ್ವರಿ, ಐಎನ್ಎಸ್(INS) ಖಂಡೇರಿ ಮತ್ತು ಐಎನ್ಎಸ್(INS) ಕಾರಂಜ್ ಜಲಾಂತರ್ಗಾಮಿಗಳನ್ನು ನೌಕಾಪಡೆಗೆ ಹಸ್ತಾಂತರಿಸಲಾಗಿದೆ. * ಇದೀಗ ಭಾರತವು ಅತ್ಯಾಧುನಿಕ ಜಲಾಂತರ್ಗಾಮಿಗಳನ್ನು ನಿರ್ಮಿಸುವ ದೇಶಗಳ ಪಟ್ಟಿಗೆ ಸೇರ್ಪಡೆಯಾಗಿದೆ. * ಇವಷ್ಟೇ ಅಲ್ಲದೇ 5 ನೇ ಜಲಾಂತರ್ಗಾಮಿ ಐಎನ್ಎಸ್(INS) ವಾಗಿರ್ ಇದೇ ಡಿಸೆಂಬರ್ ತಿಂಗಳಿನಲ್ಲಿ ತನ್ನ ಕಾರ್ಯಾಚರಣೆ ಪರಂಬಿಸುವ ನಿರೀಕ್ಷೆ ಇದೆ, ಹಾಗೂ 6 ನೇ ಜಲಾಂತರ್ಗಾಮಿ 'ಐಎನ್ಎಸ್(INS) ವಾಗ್ಶೀರ್' ನಿರ್ಮಾಣ ಕಾರ್ಯವು ಮುಕ್ತಾಯದ ಹಂತವನ್ನು ತಲುಪಿದೆ ಎಂದು ತಿಳಿದು ಬಂದಿದೆ.