Job Description: * ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಟಿಕ್ಟಾಕ್ ಆಪ್ ಸ್ಥಗಿತ (ಬ್ಯಾನ್)ವಾದ ಬಳಿಕ ಇನ್ಸ್ಟಾಗ್ರಾಂ ಈ ಟಿಕ್ಟಾಕ್ ಆಪ್ ನ ಸ್ಥಾನ ತುಂಬಲು ಆರಂಭಿಸಿದೆ, ಅಷ್ಟೇ ಅಲ್ಲದೇ ಇದೀಗ ದೇಶದಲ್ಲಿ ಇನ್ಸ್ಟಾಗ್ರಾಂ ಬಳಕೆದಾರರ ಸಂಖ್ಯೆ ಅತೀ ಹೆಚ್ಚಾಗುತ್ತಿದೆ. * ಇದೀಗ ವಿಶ್ವಾದ್ಯಂತ ಇನ್ಸ್ಟಾಗ್ರಾಂ ಡೌನ್ಲೋಡ್ ಸಂಖ್ಯೆಯಲ್ಲಿ ಭಾರತ ದೇಶವೇ ಅತೀ ಹೆಚ್ಚಿನ ಬಹುಪಾಲನ್ನು ಹೊಂದಿದೆ. * ಇಲ್ಲಿಯವರೆಗೂ ಅತಿ ಹೆಚ್ಚು ಡೌನ್ಲೋಡ್ ಆಗಿರುವ ನಾನ್ ಗೇಮಿಂಗ್ ಆಯಪ್ಗಳ ಪಟ್ಟಿಯಲ್ಲಿ ಟಿಕ್ ಟಾಕ್ ಅಗ್ರಸ್ಥಾನದಲ್ಲಿದೆ, ಅಷ್ಟೇ ಅಲ್ಲದೇ ಈ ಆಪ್ ವಿಶ್ವಾದ್ಯಂತ ಅಕ್ಟೋಬರ್ ತಿಂಗಳಿನಲ್ಲಿ ಟಿಕ್ಟಾಕ್ 5.7 ಕೋಟಿ ಮೊಬೈಲ್ಗಳಲ್ಲಿ ಡೌನ್ಲೋಡ್ ಆಗಿದೆ ಎಂದು ವರದಿಯಾಗಿದೆ, ಆದರೆ ಕಳೆದ 10 ತಿಂಗಳುಗಳಿಂದ ಟಿಕ್ಟಾಕ್ ಈ ಅಗ್ರಸ್ಥಾನವನ್ನು ಉಳಿಸಿಕೊಂಡು ಮುನ್ನಡೆದಿದೆ. * ಇದೀಗ ಇನ್ಸ್ಟಾಗ್ರಾಂ 5.6 ಕೋಟಿ ಮೊಬೈಲ್ಗಳಲ್ಲಿ ಡೌನ್ಲೋಡ್ ಆಗಿ 2 ನೇ ಸ್ಥಾನದಲ್ಲಿದೆ. * ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಂ'ನ್ನು ಹೊಸದಾಗಿ ಡೌನ್ಲೋಡ್ ಮಾಡಿಕೊಂಡವರಲ್ಲಿ ಶೇ. 39 ಜನ ಭಾರತೀಯರೇ ಇದ್ದಾರೆ ಎಂದು ತಿಳಿದುಬಂದಿದೆ. * ಅತಿ ಹೆಚ್ಚು ಡೌನ್ಲೋಡ್ ಆದ ನಾನ್ ಗೇಮಿಂಗ್ ಆಯಪ್ಗಳಲ್ಲಿ ಟಿಕ್ ಟಾಕ್ ಮತ್ತು ಇನ್ಸ್ಟಾಗ್ರಾಂ'ನ್ನು ಬಿಟ್ಟರೆ, ಫೇಸ್ಬುಕ್, ವಾಟ್ಸ್ಆಯಪ್ ಹಾಗೂ ಟೆಲಿಗ್ರಾಂ ಆಪ್'ಗಳು 3, & 4, ಹಾಗೂ 5 ನೇ ಸ್ಥಾನದಲ್ಲಿವೆ.