Job Description: * ಭಾರತದ 72 ನೇ ಗ್ರ್ಯಾಂಡ್ಮಾಸ್ಟರ್ ಆಗಿ ಕೋಲ್ಕತ್ತದ ಮಿತ್ರಾಭ ಗುಹಾ ಅವರು ಹೊರ ಹೊಮ್ಮಿದ್ದಾರೆ. * ಇತ್ತೀಚಿಗೆ ಸರ್ಬಿಯಾದಲ್ಲಿ ನಡೆದ ಚೆಸ್ ಟೂರ್ನಿಯಲ್ಲಿ ಅಗತ್ಯವಿದ್ದ 3 ನೇ ಹಾಗೂ ಅಂತಿಮ ನಾರ್ಮ್ ನ್ನು ಮಿತ್ರಾಭ ಗುಹಾ ಅವರು ಪೂರ್ಣಗೊಳಿಸಿದ್ದಾರೆ. * ಭಾರತದ ಕೋಲ್ಕತ್ತದ ಮಿತ್ರಾಭ ಗುಹಾ ಅವರು ಈ ಚೆಸ್ ಟೂರ್ನಿಯಲ್ಲಿನ 9 ನೇ ಸುತ್ತಿನಲ್ಲಿ ಸರ್ಬಿಯಾದ ಗ್ರ್ಯಾಂಡ್ಮಾಸ್ಟರ್ ನಿಕೋಲಾ ಸೆಡ್ಲಾಕ್ ಅವರನ್ನು ಸೋಲಿಸಿ ಗ್ರ್ಯಾಂಡ್ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. * ಭಾರತೀಯ ಮಿತ್ರಾಭ ಗುಹಾ ಅವರು ಕೆಲ ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ ಜರುಗಿದ ಶೇಖ್ ರಸೆಲ್ ಗ್ರ್ಯಾಂಡ್ಮಾಸ್ಟರ್ ಟೂರ್ನಿಯಲ್ಲಿ 2 ನೇ ಜಿಎಂ ನಾರ್ಮ್ ಪಡೆದುಕೊಂಡು, ಅದೇ 2 ನೇ ಸುತ್ತಿನಲ್ಲಿ 2500 ಎಲೋ ರೇಟಿಂಗ್ ನ್ನು ಪಡೆದುಕೊಂಡಿದ್ದಾರೆ.