Job Description: * ಪ್ರಸ್ತುತ ಭಾರತದ 71 ನೇ ಗ್ರ್ಯಾಂಡ್ಮಾಸ್ಟರ್ ಆಗಿ ಹೊರ ಹೊಮ್ಮಿದ ಮಹಾರಾಷ್ಟ್ರದ ನಾಗ್ಪುರದ ಸಂಕಲ್ಪ್ ಗುಪ್ತಾ. * ಇತ್ತೀಚಿಗೆ ಸರ್ಬಿಯಾದ ಅರಂಜೆಲೊವಾಕ್ನಲ್ಲಿ ಜರುಗಿದ ಜಿಎಂ ಆಸ್ಕ್ 3 ರೌಂಡ್ ರಾಬಿನ್ ಟೂರ್ನಿಯಲ್ಲಿ 2 ನೇ ಸ್ಥಾನ ಪಡೆದುಕೊಳ್ಳುವದರ ಜೊತೆಗೆ ಇವರು ಗ್ರ್ಯಾಂಡ್ಮಾಸ್ಟರ್ ನಾರ್ಮ್ ಪಡೆದುಕೊಂಡಿದ್ದಾರೆ. * ಮಹಾರಾಷ್ಟ್ರದ ನಾಗ್ಪುರದ ಸಂಕಲ್ಪ್ ಗುಪ್ತಾ ಅವರು ಟೂರ್ನಿಯಲ್ಲಿ ಒಟ್ಟು 6.5 ಪಾಯಿಂಟ್ ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. * ಸಂಕಲ್ಪ್ ಗುಪ್ತಾ ಅವರು 24 ದಿನಗಳಲ್ಲಿ 3 ಟೂರ್ನಿಗಳಲ್ಲಿ ಸತತವಾಗಿ ಆಟವಾಡುವ ಮೂಲಕ ಜಿಎಂ ನಾರ್ಮ್ ಪಡೆದುಕೊಂಡಿದ್ದಾರೆ, ಈ 3 ಟೂರ್ನಿಗಳಲ್ಲಿ ಇವರು 2599 ಕ್ಕೂ ಹೆಚ್ಚಿನ ರೇಟಿಂಗ್ ಸಾಧನೆ ಪಡೆದಿದ್ದಾರೆ. * ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ಭಾರತದ 71 ನೇ ಗ್ರ್ಯಾಂಡ್ಮಾಸ್ಟರ್ ಆಗಿರುವ ಗ್ರ್ಯಾಂಡ್ಮಾಸ್ಟರ್ ಸಂಕಲ್ಪ್ ಗುಪ್ತಾ ಅವರನ್ನು ಅಭಿನಂದನೆಗಳನ್ನೂ ತಿಳಿಸಿದ್ದಾರೆ.