Job Description: * ಇದೀಗ ದೇಶದಲ್ಲಿ ಹಣಕಾಸು ಒಳಗೊಳ್ಳುವಿಕೆಯ ಮಾಪಕಗಳಲ್ಲಿ ಭಾರತವು ಚೀನಾ ದೇಶಕ್ಕಿಂತ ಒಂದು ಹೆಜ್ಜೆ ಮುಂದೆ ಇದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (SBI) ವರದಿ ಮಾಡಿದೆ. * 2020 ನೇ ವರ್ಷದಲ್ಲಿ ದೇಶದಲ್ಲಿನ ಪ್ರತಿ ಸಾವಿರ ವ್ಯಕ್ತಿಗಳಿಗೆ 13,615 ಇಂಟರ್ನೆಟ್ ಬ್ಯಾಂಕಿಂಗ್ ವಹಿವಾಟುಗಳುನ್ನು ಮಾಡಿಕೊಡಲಾಗುತ್ತಿದೆ ಎಂದು SBI ತಿಳಿಸಿದೆ. * ಈ ಹಿಂದೆ 2015 ರಲ್ಲಿ ಪ್ರತಿ ಸಾವಿರ ವ್ಯಕ್ತಿಗಳಿಗೆ 183 ವಹಿವಾಟುಗಳು ಮಾತ್ರ ನಡೆಸಲಾಗಿತ್ತು, ಆದರೆ ಇದೀಗ ದೇಶದಲ್ಲಿ 2020 ನೇ ವರ್ಷದಲ್ಲಿ ಪ್ರತಿ 1 ಲಕ್ಷ ವಯಸ್ಕರಿಗೆ ಶೇ. 14.7 ರಷ್ಟು ಬ್ಯಾಂಕ್ ಶಾಖೆಗಳು ಇದ್ದವು, ಈ ಬ್ಯಾಂಕ್ ಶಾಖೆಗಳು 2015 ರಲ್ಲಿ ಶೇ. 13.6 ರಷ್ಟು ಮಾತ್ರ ಇದ್ದವು ಎಂದು ತಿಳಿಸಿದೆ. * ಪ್ರಸ್ತುತ SBI ವರದಿ ಮಾಡಿರುವ ಪ್ರಕಾರ 2020 ರಲ್ಲಿ ಭಾರತದಲ್ಲಿನ ಒಟ್ಟು ಬ್ಯಾಂಕ್ ಶಾಖೆಗಳ ಪ್ರಮಾಣವು ಜರ್ಮನಿ, ಚೀನಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪ್ರತಿ ಸಾವಿರ ಜನರಿಗೆ ಇರುವ ಶಾಖೆಗಳಿಗಿಂತ ಜಾಸ್ತಿ ಇವೆ ಎಂದು ತಿಳಿಸಿದೆ. * ಪ್ರಸ್ತುತ ಭಾರತದಲ್ಲಿ ಶೂನ್ಯ ಬ್ಯಾಲೆನ್ಸ್ ಅಥವಾ ಅತ್ಯಂತ ಕಡಿಮೆ ಬ್ಯಾಲೆನ್ಸ್ನ ಬ್ಯಾಂಕ್ ಖಾತೆ ಆರಂಭಿಸುವ ಯೋಜನೆಗಳ ಅಡಿಯಲ್ಲಿ ಬ್ಯಾಂಕ್ ಖಾತೆ ಹೊಂದಿರುವವರ ಸಂಖ್ಯೆಯು ಹೆಚ್ಚಿವೆ ಎಂದು ತಿಳಿಸಿದ್ದಾರೆ. * ಕಳೆದ '7' ವರ್ಷಗಳಿಂದ ಆರ್ಥಿಕ ಒಳಗೊಳ್ಳುವಿಕೆಗೆ ಬಗೆಗಿನ ಅಭಿಯಾನದಲ್ಲಿ 43.7 ಕೋಟಿ ಶೂನ್ಯ ಬ್ಯಾಲೆನ್ಸ್ ಖಾತೆಗಳನ್ನು ಪ್ರಾರಂಭಿಸಲಾಗಿದೆ ಎಂದು SBI ತಿಳಿಸಿದೆ.