Job Description: * ಇತ್ತೀಚಿನ ದಿನಗಳಲ್ಲಿ ಚೀನಾ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಗೆಳೆತನ ಇನ್ನಷ್ಟು ಉತ್ತಮವಾಗುತ್ತಿದೆ, ಈ ಹಿನ್ನಲೆಯಿಂದಾಗಿ ಚೀನಾ ತನ್ನ ಸುಧಾರಿತ ಯುದ್ಧನೌಕೆಯನ್ನು ಪಾಕಿಸ್ತಾನಕ್ಕೆ ರವಾನಿಸಿದೆ. * ಭಾರತವು ಅಫ್ಘಾನಿಸ್ತಾನ ರಾಷ್ಟ್ರದ ಬಗೆಗಿನ ಸಭೆಯನ್ನು ಆಯೋಜಿಸುತ್ತಿದೆ, ಈ ಸಭೆಯಿಂದ ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರಗಳು ಹಿಂದೆ ಸರಿದಿವೆ, ಅಷ್ಟೇ ಅಲ್ಲದೇ ಚೀನಾ ದೇಶವು ಹಿಂದೂ ಮಹಾಸಾಗರ ಹಾಗೂ ಅರಬ್ಬಿ ಸಮುದ್ರದಲ್ಲೂ ತನ್ನ ಪ್ರಾಬಲ್ಯ ಉತ್ತವಾಗಿಸಿಕೊಳ್ಳಲು ಎಲ್ಲಿಲ್ಲದ ಕಸರತ್ತು ನಡೆಸುತ್ತಿದೆ. * ಹಿಂದೂ ಮಹಾಸಾಗರದಲ್ಲಿ ಶಾಂತಿ, ಸ್ಥಿರತೆ ಕಾಪಾಡಲು ಪಾಕಿಸ್ತಾನದ ಸಾಮರ್ಥ್ಯವನ್ನು ಪಿಎನ್ಎಸ್ ತುಘ್ರಿಲ್ ಹೆಚ್ಚಿಸಲಿದೆ ಎಂದು ಚೀನಾ ರಾಷ್ಟ್ರಕ್ಕೆ ಪಾಕಿಸ್ತಾನದ ರಾಯಭಾರಿ ಮೊಯಿನ್ ಉಲ್ ಹಕ್ ಅವರು ತಿಳಿಸಿದ್ದಾರೆ. * ಚೀನಾ ದೇಶವು ಈ ಯುದ್ಧನೌಕೆ ಸ್ಟೇಟ್ ಶಿಪ್ ಬಿಲ್ಡಿಂಗ್ ಕಾರ್ಪೊರೇಷನ್ ಲಿಮಿಟೆಡ್ ಅಡಿಯಲ್ಲಿ ನಿರ್ಮಿಸಿದೆ, ಇತ್ತೀಚಿಗೆ ಈ ನೌಕೆಯನ್ನು ಶಾಂಘೈನಲ್ಲಿ ಜರುಗಿದ ಸಭೆಯೊಂದರಲ್ಲಿ ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿದೆ, ಈ ಯುದ್ಧ ನೌಕೆಗೆ ಪಿಎನ್ಎಸ್ ತುಘ್ರಿಲ್ ಎಂದು ನಾಮಕರಣ ಮಾಡಲಾಗಿದೆ ಎಂದು ಗ್ಲೋಬಲ್ ಟೈಮ್ಸ್ ಮಾಹಿತಿ ನೀಡಿದೆ. * ಪಿಎನ್ಎಸ್ ತುಘ್ರಿಲ್ ಯುದ್ಧ ನೌಕೆಯು 2017 ರಲ್ಲಿ ತನ್ನ ನಿರ್ಮಾಣ ಕಾರ್ಯ ಪ್ರಾರಂಭಿಸಿತ್ತು, ಈ ಮೌಕೆ ಅತ್ಯಾಧುನಿಕವಾಗಿದೆ, ಈ ನೌಕೆಯ ಗಾಳಿಯಲ್ಲಿರುವ ವಿಮಾನಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಶಕ್ತಿ ಸಾಮರ್ಥ್ಯವನ್ನು ಹೊಂದಿದೆ. * ಪಾಕಿಸ್ತಾನಕ್ಕಾಗಿಯೇ ಚೀನಾ ದೇಶವು ಸಿದ್ಧಪಡಿಸುತ್ತಿರುವ 054 ಮಾದರಿಯ 4 ಯುದ್ಧನೌಕೆಗಳಲ್ಲಿ ಇದು ಮೊದಲನೇ ಯುದ್ಧ ನೌಕೆಯಾಗಿದೆ, ಇನ್ನಉಳಿದ ನೌಕೆಗಳನ್ನು ಚೀನಾ ಸ್ಟೇಟ್ ಶಿಪ್ ಬಿಲ್ಡಿಂಗ್ ಕಾರ್ಪೊರೇಷನ್ ಲಿಮಿಟೆಡ್'ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಚೀನಾ ತಿಳಿಸಿದೆ.