Job Description: * ಪ್ರತಿ ವರ್ಷವು ನವೆಂಬರ್. 9 ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನ ಆಚರಣೆ ಮಾಡಲಾಗುತ್ತದೆ, ನಾಗರಿಕ ಪ್ರಜೆಗಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ, ಅಷ್ಟೇ ಯಾವುದೇ ಪ್ರಜೆ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ಕಾನೂನು ಸಲಹೆಗಳನ್ನು ಪಡೆಯಬಹುದಾಗಿದೆ. * ಕಾನೂನು ಸೇವೆಗಳ ಪ್ರಾಧಿಕಾರದ ಕಾಯ್ದೆಯ 12 ರ ಅಡಿಯಲ್ಲಿ ಉಲ್ಲೇಖಿಸಿರು ಹಾಗೆ ಮಹಿಳೆಯರು ಮತ್ತು ಮಕ್ಕಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಅಂಗವಿಕಲರು, ಕಾರ್ವಿುಕ ವರ್ಗ, ಮಾನವ ಕಳ್ಳಸಾಗಣೆಗೆ ಒಳಗಾದವರು, ಕಾರ್ವಿುಕ ವರ್ಗ, ಕಸ್ಟಡಿಯಲ್ಲಿರುವ ಆರೋಪಿ, ಪ್ರಾಕೃತಿಕ ವಿಕೋಪಕ್ಕೆ ತುತ್ತಾದವರು, ವಾರ್ಷಿಕ 3 ಲಕ್ಷಕ್ಕೂ ಕಡಿಮೆ ಆದಾಯ ಇರುವ ವ್ಯಕ್ತಿಗಳಿಗೆ ಉಚಿತವಾಗಿ ಕಾನೂನು ನೆರವು ನೀಡಲಾಗುತ್ತದೆ, ಅಷ್ಟೇ ಅಲ್ಲದೇ ನ್ಯಾಯಾಲಯದ ಪ್ರಕರಣಗಳಲ್ಲಿ ಕಾನೂನು ಪ್ರಾಧಿಕಾರದಿಂದಲೇ ವಕೀಲರನ್ನೂ ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ದೇಶದ ಪ್ರತಿ ಪ್ರಜೆಯ ಮನೆ ಬಾಗಿಲಿಗೆ ಕಾನೂನು ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ, ಈ ಹಿಂದೆ 1987 ರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆಯನ್ನು ಸ್ಥಾಪಿಸಲಾಗಿದೆ, ಕೇಂದ್ರ ಕಾನೂನು ಸೇವೆಗಳ ಪ್ರಾಧಿಕಾರವು ಈ ಕಾಯ್ದೆಯನ್ನು 1995 ರಲ್ಲಿ ಕಾರ್ಯರೂಪಕ್ಕೆ ತರಲು ಸುಪ್ರೀಂಕೋರ್ಟ್ ಅಡಿಯಲ್ಲಿ ಕೆಲಸ ಮಾಡಿತು. * ಕಾನೂನು ಸೇವೆಗಳ ಪ್ರಾಧಿಕಾರವು ಈ ಕಾಯ್ದಯುನ್ನು 'ಸರ್ವರಿಗೂ ನ್ಯಾಯ ಸರ್ವಸಮಾನ' ಎಂಬ ಧ್ಯೇಯವ್ಯಾಕ್ಯದ ಅಡಿಯಲ್ಲಿ ರಚಿಸಿದೆ.