Job Description: * ಫೇಸ್ಬುಕ್ ಸಂಸ್ಥೆಯು ತನ್ನ ಫೇಸಿಯಲ್ ರೆಕಗ್ನಿಷನ್ ವ್ಯವಸ್ಥೆಯನ್ನು ಕೆಲವೇ ಕೆಲವು ದಿನಗಳಲ್ಲಿ ಮುಚ್ಚಲಿದೆ ಎಂದು ತಿಳಿಸಿದೆ. * ಫೇಸ್ಬುಕ್ ಈ ಹಿಂದೆ 2010 ರಲ್ಲಿ ಫೇಸಿಯಲ್ ರೆಕಗ್ನಿಷನ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿತ್ತು, ಆದರೆ ಈ ವ್ಯವಸ್ಥೆ ಬಗ್ಗೆ ನಾನಾ ದೂರುಗಳು ಕೇಳಿಬಂದ ಹಿನ್ನಲೆಯಿಂದಾಗಿ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿಸಿದೆ. * ಪ್ರಸ್ತುತ ಫೇಸ್ಬುಕ್ನ 3 ನೇ ಒಂದು ಭಾಗದಷ್ಟು ಜನರು ಈ ಫೇಸಿಯಲ್ ರೆಕಗ್ನಿಷನ್ ಸಾಫ್ಟ್ವೇರ್ ಬಳಸಿಕೊಂಡು ಬೇರೆ ಬೇರೆ ಜನರಿಗೆ ಫೋಟೋ ಗಳನ್ನೂ ಟ್ಯಾಗ್ ಮಾಡುತ್ತಿದ್ದರು, ಸದ್ಯ ಇದೀಗ ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸುವದರಿಂದ ಕೋಟ್ಯಂತರ ಜನರ ಫೇಸಿಯಲ್ ರೆಕಗ್ನಿಷನ್ ಟೆಂಪ್ಲೇಟ್ಗಳು ಡಿಲೀಟ್ ಆಗಲಿವೆ ಎಂದು ಫೇಸ್ಬುಕ್ ತಿಳಿಸಿದೆ. * ಪ್ರಸ್ತುತ ಅಮೇರಿಕದ ನ್ಯೂಯಾರ್ಕ್ ಟೈಮ್ಸ್ ಸುದ್ದಿವಾಹಿನಿ ನೀಡಿರುವ ಮಾಹಿತಿಯ ಪ್ರಕಾರ ಇದೇ ಡಿಸೆಂಬರ್ ವೇಳೆಗೆ ಫೇಸಿಯಲ್ ರೆಕಗ್ನಿಷನ್ನ ಟೆಂಪ್ಲೇಟ್ಗಳನ್ನು ಡಿಲೀಟ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.