Job Description: * ಇತ್ತೀಚಿಗೆ 'ಕ್ಸಾವಿ ಹೆರ್ನಾಂಡಜ್' ಅವರು ಬಾರ್ಸಿಲೋನಾ ತಂಡದ ಹೊಸ ಕೋಚ್ ಆಗಿ ನೇಮಕಮಾಡಲಾಗಿದೆ. * ಇಲ್ಲಿಯವರೆಗೆ 'ಕ್ಸಾವಿ ಹೆರ್ನಾಂಡಜ್' ಬಾರ್ಸಿಲೋನಾ ತಂಡವನ್ನು ಪ್ರತಿನಿಧಿಸಿದ್ದರು, ಇದೀಗ ಇವರು ಕೋಚ್ ಆಗಿ ಕ್ಲಬ್ಗೆ ನೇಮಕವಾಗಿ ವಾಪಸಾಗಿದ್ದಾರೆ, ಈ ಸುದ್ದಿಯನ್ನು ಕೇಳಿ ಫುಟ್ಬಾಲ್ ಪ್ರೇಮಿಗಳು ಸಂಭ್ರಮಿಸಿದರು. * 'ಕ್ಸಾವಿ ಹೆರ್ನಾಂಡಜ್ ಅವರು ಬಾರ್ಸಿಲೋನಾ ಅಧ್ಯಕ್ಷ ಜಾನ್ ಲಾಪೋರ್ಟ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದರು. * 'ಕ್ಸಾವಿ ಹೆರ್ನಾಂಡಜ್' ಅವರು ಬಾರ್ಸಿಲೋನಾ ತಂಡದ ಪರವಾಗಿ ಒಟ್ಟಾರೆ 767 ಪಂದ್ಯಗಳಲ್ಲಿ ಆಟವಾಡಿದ್ದಾರೆ, ಈ ಹಿಂದೆ ಇವರು 6 ವರ್ಷಗಳ ಹಿಂದೆ ಅಲ್ ಸಡ್ ತಂಡದ ಪರವಾಗಿ ಆಡಲು ಕತಾರ್ಗೆ ಪ್ರಯಾಣ ಬೆಳೆಸಿದ್ದರು, 'ಕ್ಸಾವಿ ಹೆರ್ನಾಂಡಜ್' ಅವರು ಇದೀಗ ಮರಳಿ ಬಾರ್ಸಿಲೋನಾ ಕ್ಲಬ್ ಗೆ ಸೇರ್ಪಡೆಯಾಗಿದ್ದಾರೆ.