Job Description: * ಕೇಂದ್ರ ಸರ್ಕಾರವು ಮಕ್ಕಳಿಗಾಗಿ ಲಸಿಕೆಯನ್ನು ನೀಡುವ ನಿಟ್ಟಿನಲ್ಲಿ ಝೈಡಸ್ ಕ್ಯಾಡಿಲಾದಿಂದ 'ಝೈಕೋವ್ ಡಿ' ಎಂಬ ಲಸಿಕೆಯ 1 ಕೋಟಿ ಡೋಸ್ಗಳನ್ನು ಖರೀದಿಸಲಿದೆ ಎಂದು ತಿಳಿಸಿದೆ. * ಈ 'ಝೈಕೋವ್ ಡಿ' ಎಂಬ ಲಸಿಕೆಯ ಪ್ರತಿ ಡೋಸ್ಗೆ 265 ರೂ. ಹಾಗೂ ಅದರ ಜೆಟ್ ಆಯಪ್ಲಿಕೇಟರ್ ಎಂಬ ವ್ಯವಸ್ಥೆಗೆ 93 ರೂ. ದರ ನಿಗದಿ ಪಡಿಸಿದೆ, ಒಟ್ಟಾರೆ ಇದಕ್ಕೆ 358 ರೂ. ವೆಚ್ಚ ತಗುಲಲಿದೆ ಎಂದು ಕೇಂದ್ರ ತಿಳಿಸಿದೆ. * ಮಕ್ಕಳಿಗೆ ಫಾರ್ಮಾ ಜೆಟ್ ಎಂಬ ಸೂಜಿ ರಹಿತ ವ್ಯವಸ್ಥೆಯ ಮೂಲಕ '3' ಡೋಸ್ ಕೋವಿಡ್-19 ಪ್ರತಿರೋಧಕ ಲಸಿಕೆಯನ್ನು ನೀಡಲು ಕೇಂದ್ರ ಸರ್ಕಾರ ತಿಳಿಸಿದೆ. * ಈ 'ಝೈಕೋವ್ ಡಿ' ಎಂಬ ಲಸಿಕೆಯನ್ನು 12 ರಿಂದ 17 ವರ್ಷ ವಯೋಮಿತಿಯ ಮಕ್ಕಳಿಗೆ ನೀಡಲು ಉದ್ದೇಶಿಸಲಾಗಿದೆ.