Job Description: * ಪ್ರಸ್ತುತ ವಿಶ್ವ ಮಾನ್ಯ ನಾಯಕರ ಪಟ್ಟಿಯಲ್ಲಿ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರು ಸತತ 2 ನೇ ಬಾರಿಗೆ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ. * ಇತ್ತೀಚಿಗೆ ಅಮೆರಿಕದ 'ಮಾರ್ನಿಂಗ್ ಕನ್ಸಲ್ಟ್’ ಎಂಬ ಸಂಸ್ಥೆಯು, ದೇಶದಲ್ಲಿನ ನಾಯಕತ್ವ ಮತ್ತು ಆಡಳಿತ ವೈಖರಿಯನ್ನು ಪರಿಗಣಿಸಿ ಈ ಪಟ್ಟಿಯನ್ನು ಸಿದ್ದಪಡಿಸಿದೆ. * ಈ ಸಮೀಕ್ಷೆಯನ್ನು ಒಟ್ಟಾರೆ 13 ದೇಶಗಳ ಬಲಿಷ್ಠ ನಾಯಕರ ಬಗ್ಗೆ ಕೈಗೊಳ್ಳಲಾಗಿದೆ, ಈ ಸಮೀಕ್ಷೆಯಲ್ಲಿ ಶೇ.70 ರಷ್ಟು ಜನರು ಪ್ರಧಾನಿ ಮೋದಿಯವರನ್ನು ಉತ್ತಮ ನಾಯಕರಾಗಿದ್ದಾರೆ, ಹಾಗೂ ಅವರ ಆಡಳಿತ ವೈಖರಿಯನ್ನು ಮೆಚ್ಚಿಕೊಂಡಿದ್ದಾರೆ. * ಕಳೆದ ವರ್ಷ ಇದೇ 'ಮಾರ್ನಿಂಗ್ ಕನ್ಸಲ್ಟ್’ ಎಂಬ ಸಂಸ್ಥೆಯು ಸಮೀಕ್ಷೆಯನ್ನು ನಡೆಸಿತ್ತು ಆ ಸಂಧರ್ಭದಲ್ಲಿ ಭಾರತೀಯ ಪ್ರಧಾನಿ ಮೋದಿ ಅಗ್ರಗಣ್ಯ ನಾಯಕರಾಗಿದ್ದರು. * ಅಗ್ರಗಣ್ಯ ನಾಯಕರ ಪಟ್ಟಿಯಲ್ಲಿ ಮೆಕ್ಸಿಕೋದ ಅಧ್ಯಕ್ಷ ಆಯಂಡ್ರೆಸ್ ಮ್ಯಾನ್ಯುಯೆಲ್ ಲೊಪೇಜ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ, ಹಾಗೂ ಇಟಲಿಯ ಮರಿಯೊ ಡ್ರಾ 3 ನೇ ಸ್ಥಾನ, ಜರ್ಮನಿಯ ಪ್ರಧಾನಿ ಆಯಂಜೆಲಾ ಮಾರ್ಕೆಲ್ 4 ನೇ ಸ್ಥಾನ, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೊರಿಸನ್ ಅವರು ಅಗ್ರ 5 ನೇ ಸ್ಥಾನ, ಅಮೆರಿಕ ಅಧ್ಯಕ್ಷ ಜೊ ಬೈಡನ್ 6 ನೇ ಸ್ಥಾನದಲ್ಲಿದ್ದಾರೆ ಎಂದು ಈ ಸಂಸ್ಥೆ ವರದಿ ಮಾಡಿದೆ.