Job Description: * ಪ್ರತಿ ವರ್ಷವು ಭಾರತದಲ್ಲಿ ನವೆಂಬರ್. 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಣೆ ಮಾಡಲಾಗುತ್ತದೆ, ಅಷ್ಟೇ ಅಲ್ಲದೇ ಈ ದಿನದಂದು ಜನ ಸಾಮಾನ್ಯರಿಗೆ ಕ್ಯಾನ್ಸರ್ ತಡೆಗಟ್ಟುವಿಕೆ, ಹಾಗೂ ಈ ಕಾಯಿಲೆಯ ಬಗೆಗಿನ ಜಾಗೃತಿಯ ಮಹತ್ವವನ್ನು ತಿಳಿಸಲಿದೆ. * ಪ್ರಸ್ತುತ ದೇಶದಲ್ಲಿ ಈ ಹಿಂದೆ 1975 ರಲ್ಲಿ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲು ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. * ಪ್ರತಿವರ್ಷವು ಭಾರತದಲ್ಲಿ ಸರಿ ಸುಮಾರು 1.1 ಮಿಲಿಯನ್ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ, ಅಷ್ಟೇ ಅಲ್ಲದೇ ಭಾರತದಲ್ಲಿ ಪ್ರತೀ 8 ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಕೋಶದ ಕ್ಯಾನ್ಸರ್ನಿಂದ ಮೃತಳಾಗುತ್ತಿದ್ದಾಳೆ. * ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ತಂಬಾಕು ಸೇವನೆಯು ಕ್ಯಾನ್ಸರ್ ಸಾವಿಗೆ ಅತೀ ದೊಡ್ಡ ಕಾರಣವಾಗಿದೆ ಎಂದು ತಿಳಿಸಿದ್ದಾರೆ, ಪ್ರಪಂಚದಾದ್ಯಂತ ವಾರ್ಷಿಕವಾಗಿ ಅಂದಾಜು '6' ಮಿಲಿಯನ್ ಜನರನ್ನು ಬಲಿ ತಗೆದುಕೊಳ್ಳುತ್ತಿದೆ.