Job Description: * ಕ್ರಿಕೆಟ್'ನ ಇತಿಹಾಸದಲ್ಲೇ 'ಉಸ್ತಾದ್ ಜೀ' ಎಂದೇ ಪ್ರಖ್ಯಾತಿ ಪಡೆದಿರುವ ಕೋಚ್ ತಾರಕ್ ಸಿನ್ಹಾ ಅವರು ಅನಾರೋಗ್ಯದ ಹಿನ್ನಲೆಯಿಂದಾಗಿ ತಮ್ಮ 71 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. * ತಾರಕ್ ಸಿನ್ಹಾ ಅವರು ದೆಹಲಿಯ ಕ್ರಿಕೆಟ್ ವಲಯದಲ್ಲಿ ದ್ರೋಣಾಚಾರ್ಯ ಎಂದು ಪ್ರಖ್ಯಾತಿ ಪಡೆದಿದ್ದರು, ಹಾಗೂ ಇವರು ಸಾನೆಟ್ ಕ್ರಿಕೆಟ್ ಕ್ಲಬ್ ನ ಸಂಸ್ಥಾಪಕರಾಗಿದ್ದರು, ಅಷ್ಟೇ ಅಲ್ಲದೇ ಇವರು ಸುಮಾರು '5' ದಶಕಗಳಿಂದ ಕ್ರಿಕೆಟ್ ತರಬೇತಿಯನ್ನು ನೀಡುತ್ತಿದ್ದರು. * ತಾರಕ್ ಸಿನ್ಹಾ ಅವರ ಕೈಯಲ್ಲಿ ರಿಷಭ್ ಪಂತ್ ಕ್ರಿಕೆಟ್ ತರಬೇತಿಯನ್ನು ಪಡೆದುಕೊಂಡಿದ್ದಾರೆ, ಇದೀಗ ಇವರ ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ. * ತಾರಕ್ ಸಿನ್ಹಾ ಅವರಿಗೆ ಈ ಹಿಂದೆ 2018 ರಲ್ಲಿ ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪುರಸ್ಕಾರ ಲಭಿಸಿದೆ.