Job Description: * ಅಬುಧಾಬಿ ಸರ್ಕಾರವು ಇದೀಗ ಅಬುಧಾಬಿಯಲ್ಲಿನ ಮುಸ್ಲಿಮೇತರ ವ್ಯಕ್ತಿಗಳು ಪರಸ್ಪರ ಮದುವೆಯಾಗಲು, ಹಾಗೂ ವಿಚ್ಛೇದನ ಪಡೆಯಲು, ಮಗುವಿನ ಪಾಲನೆಯ ಹೊಣೆ ಹೊರುವ ಅವಕಾಶ ಒದಗಿಸಲಾಗಿದೆ, ಈ ಮಾಹಿತಿಯನ್ನು ಅಬುಧಾಬಿಯ ಶೇಖ್ ಖಲೀಫಾ ಬಿನ್ ಝಾಯೇದ್ ಅಲ್-ನಹಯಾನ್ ತಿಳಿಸಿದ್ದಾರೆ ಹಾಗೂ ಆದೇಶವನ್ನು ಹೊರಡಿಸಿದ್ದಾರೆ. * ಅಬುಧಾಬಿಯ ಶೇಖ್ ಖಲೀಫಾ ಬಿನ್ ಝಾಯೇದ್ ಅಲ್-ನಹಯಾನ್ ಅವರು UAE ಯ 7 ಎಮಿರೇಟ್ಸ್ಗಳ ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. * ಅಬುಧಾಬಿಯಲ್ಲಿ ಮುಸ್ಲಿಮೇತರ ಕುಟುಂಬಗಳಿಗಾಗಿ ವಿಚಾರಣೆ ನಡೆಸಲು ಪ್ರತ್ಯೇಕ ನ್ಯಾಯಾಲಯವನ್ನು ರೂಪಿಸಲಾಗುತ್ತದೆ, ಈ ನ್ಯಾಯಾಲಯವು, ಇಂಗ್ಲೀಷ್ ಹಾಗೂ ಅರೇಬಿಕ್ ಭಾಷೆಗಳಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. * ಅಬುಧಾಬಿಯ ಮುಸ್ಲಿಮೇತರರಿಗಾಗಿ ಕೌಟುಂಬಿಕ ಕಾನೂನುಗಳ ಸವಲತ್ತು ಕಲ್ಪಿಸಿದ ಮೊದಲ ಇಸ್ಲಾಂ ರಾಷ್ಟ್ರವಾಗಿದೆ.