Job Description: * ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ರಾಮ ಮಂದಿರವು 2023 ರ ಡಿಸೆಂಬರ್ ವೇಳೆಗೆ ಸಿದ್ಧವಾಗಲಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕೇಂದ್ರೀಯ ಸಹಮಂತ್ರಿಯಾದ ಗೋಪಾಲ್ ತಿಳಿಸಿದ್ದಾರೆ. * ಗೋಪಾಲ್ ಅವರು ವಿಶ್ವ ಹಿಂದೂ ಪರಿಷತ್ ನಾಯಕ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾದ ಚಂಪತ್ ರಾಯ್ ಅವರೊಂದಿಗೆ ಸಂಪರ್ಕದಲ್ಲಿದ್ದು, ದೇವಾಲಯ ನಿರ್ಮಾಣದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತಿದ್ದಾರೆ. * ಇನ್ನು 15 ದಿನಗಳಲ್ಲಿ ಮಿರ್ಜಾಪುರ ಮತ್ತು ಬೆಂಗಳೂರು ಗ್ರಾನೈಟ್ ಬಳಸಿ ದೇವಸ್ಥಾನದ ತಳಪಾಯ ಕಾಮಗಾರಿ ಪೂರ್ಣಗೊಳ್ಳಲಿದ್ದು, ದೇವಾಲಯವು 360 ಅಡಿ ಉದ್ದ ಮತ್ತು 235 ಅಡಿ ಅಗಲವನ್ನು ಹೊಂದಿದ್ದು, 5 ಶಿಖರ್ ಗಳನ್ನು ಒಳಗೊಂಡಿರುತ್ತದೆ, 2023 ರ ಡಿಸೆಂಬರ್ ರಿಂದ ದರ್ಶನಕ್ಕಾಗಿ ದೇವಾಲಯವನ್ನು ತೆರೆಯುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಗೋಪಾಲ್ ಅವರು ತಿಳಿಸಿದ್ದಾರೆ. * ದೇವಾಲಯದ ನಿರ್ಮಾಣಕ್ಕೆ ಸುಮಾರು 700-800 ಕೋಟಿ ರೂ. ವೆಚ್ಚವಾಗಲಿದ್ದು, 3,000 ಕೋಟಿ ದೇಣಿಗೆ ಸಂಗ್ರಹಿಸಲಾಗಿದೆ ಎಂದು ದೇವಾಲಯದ ಟ್ರಸ್ಟ್ ಪ್ರಾಧಿಕಾರ ತಿಳಿಸಿದೆ. * ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಗಂಗಾಪುರಂ ಕಿಶನ್ ರೆಡ್ಡಿ ಅವರು ಅಯೋಧ್ಯೆ ಎಲ್ಲ ರಾಜ್ಯಗಳಿಗೂ ಸಂಪರ್ಕ ಕಲ್ಪಿಸಲಿದ್ದು, ವಿವಿಧ ರಾಜ್ಯಗಳ ಮತ್ತು ದೇಶಗಳ ಜನರು ಇಲ್ಲಿಗೆ ಭೇಟಿ ನೀಡಲು ಸಹಕಾರಿಯಾಗುತ್ತದೆ, ಅಲ್ಲದೆ ನಾವು ಅಯೋಧ್ಯೆಯನ್ನು ಅಂತರರಾಷ್ಟ್ರೀಯ ಪ್ರವಾಸೋದ್ಯಮದ ಅತ್ಯಂತ ಜನಸಂದಣಿ ಸ್ಥಳವನ್ನಾಗಿ ಮಾಡಲು ಎಲ್ಲ ರೀತಿಯ ಕ್ರಮವನ್ನು ಕೈಗೊಳ್ಳಲಿದ್ದೇವೆ ಎಂದು ಅವರು ಹೇಳಿದರು.