Job Description: * ಉತ್ತರ ಕರ್ನಾಟಕದ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮದ ಬೆಳವಣಿಗೆಗೆ ಸಹಾಯ ನೀಡಲು ಕಾರ್ಗೊ ಸೌಲಭ್ಯವನ್ನು ಇಲ್ಲಿನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅಧಿಕೃತವಾಗಿ ಪ್ರಾರಂಭಿಸಲಾಗಿದೆ. * ಈ ಕಾರ್ಗೊ ಸೌಲಭ್ಯದಿಂದ ತ್ವರಿತವಾಗಿ ಕೊರಿಯರ್, ತುರ್ತು ಅಗತ್ಯದ ಸಾಮಗ್ರಿಗಳನ್ನೂ ಸಾಗಿಸಲು, ಇದರ ಜೊತೆಗೆ ಇ-ಕಾಮರ್ಸ್ ಕಂಪನಿಗಳ ಉದ್ಯಮಿಗಳಿಗೆ ಸಹಾಯವಾಗಲಿದೆ. * ಇದೀಗ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಂಡಿಗೊ, ಸ್ಟಾರ್ ಏರ್ ಹಾಗೂ ಅಲಯನ್ಸ್ ಏರ್ ಸಂಸ್ಥೆಗಳು ಪ್ರಯಾಣಿಕ ಸೌಲಭ್ಯಗಳನ್ನು ನೀಡುತ್ತಿವೆ, ಈ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಚೆನ್ನೈ, ಬೆಂಗಳೂರು, ಮುಂಬೈ, ಕೊಚ್ಚಿ ಹಾಗೂ ಹೈದರಾಬಾದ್ ನಂತಹ ವ್ಯಾಣಿಜ್ಯ ನಗರಗಳಿಗೆ ವಿಮಾನವನ್ನು ಕಲ್ಪಿಸಲಾಗಿದೆ. * ಕೇಂದ್ರ ವಿಮಾನಯಾನ ಸಚಿವಾಲಯ 2021-22ರ ಬಜೆಟ್ನಲ್ಲಿ ರೈತರ ಉತ್ಪನ್ನಗಳನ್ನು ವೇಗವಾಗಿ ದೇಶ ಮತ್ತು ವಿದೇಶಕ್ಕೆ ರವಾನಿಸಲು ದೇಶದಲ್ಲಿನ 53 ವಿಮಾನ ನಿಲ್ದಾಣಗಳಲ್ಲಿ ಕೃಷಿ ಉಡಾನ್ ಸೌಲಭ್ಯ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಲಾಗಿತ್ತು. * ಈ ಕಾರ್ಗೊ ಸೇವೆಯಿಂದ ವೇಗವಾಗಿ ಸಾಮಗ್ರಿಗಳನ್ನು ತರಿಸಿಕೊಳ್ಳಲು ಮತ್ತು ರವಾನಿಸಲು ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ.