Job Description: * ಭಾರತ ಮತ್ತು ಬ್ರಿಟನ್ ದೇಶಗಳು ವಿಶ್ವದ ಬಡ ರಾಷ್ಟ್ರಗಳಿಗೆ ನವೀಕರಿಸಬಹುದಾದ ಮೂಲದ ವಿದ್ಯುತ್'ನ್ನು ಪೂರೈಸುವ ವಿಶ್ವ ಪವರ್ ಗ್ರಿಡ್ ಯೋಜನೆಗೆ ಚಾಲನೆಯನ್ನು ನೀಡಿವೆ. * ಈ ಉಭಯ ದೇಶಗಳು ಈ ಯೋಜನೆಯನ್ನು ಜಂಟಿಯಾಗಿ ಘೋಷಣೆ ಮಾಡಿವೆ. * ಸೌರಶಕ್ತಿ ಮೂಲಕ ಅತೀ ಹೆಚ್ಚಿನ ವಿದ್ಯುತ್'ನ್ನು ಉತ್ಪಾದಿಸುವ ದೇಶಗಳು, ಸೌರಶಕ್ತಿ ಲಭ್ಯವಿಲ್ಲದ ದೇಶಗಳಿಗೆ ಅ ಹೆಚ್ಚಿನ ವಿದ್ಯುತ್'ನ್ನು ಪೂರೈಸಲು ಈ ಪವರ್ ಗ್ರಿಡ್ ಯೋಜನೆ ಸಹಾಯ ಮಾಡಲಿದೆ, ಅಷ್ಟೇ ಅಲ್ಲದೇ ಇದರಿಂದಾಗಿ ಇಂಗಾಲದ ಹೊರಸೂಸುವಿಕೆಯನ್ನು ತಡೆಗಟ್ಟಲು ಮತ್ತು ಬಡ ರಾಷ್ಟ್ರಗಳಿಗೆ ನೆರವಾಗಲು ಈ ಪವರ್ ಗ್ರಿಡ್ ಅನುಕೂಲ ಮಾಡಿಕೊಡಲಿದೆ ಎಂದು ತಿಳಿದು ಬಂದಿದೆ. * ಈ ಜಾಗತಿಕ ಪವರ್ ಗ್ರಿಡ್ ಯೋಜನೆಗೆ ಸುಮಾರು 80 ದೇಶಗಳು ತಮ್ಮ ಬೆಂಬಲ ಸೂಚಿಸಿವೆ. * ಬ್ರಿಟನ್ ದೇಶವು 'ನೆಟ್ ಝೀರೋ' ಗುರಿ ಸಾಧಿಸಲು ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ಮರುರಚಿಸಲು ಸಿದ್ಧವಾಗಿದೆ ಎಂದು ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಅವರು ತಿಳಿಸಿದ್ದಾರೆ. * ಬ್ರಿಟನ್ ದೇಶವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ 1,000 ಕೋಟಿ ರೂ. ನೆರವು ನೀಡಲಿದೆ ಎಂದು ತಿಳಿಸಲಾಗಿದೆ.