Job Description: * ಪ್ರಸ್ತುತ 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಒಟ್ಟಾರೆ 66 ಸಾಧಕರನ್ನು ಆಯ್ಕೆ ಮಾಡಿದ್ದಾರೆ, ಅದರಲ್ಲಿ ರಾಜ್ಯದ 4 ಕ್ರೀಡಾ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. * ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದರು: ಗ್ರ್ಯಾನ್ ಸ್ಲಾಂ ವಿಜೇತ ಟೆನಿಸ್ ಆಟಗಾರ ರೋಹನ್ ಬೋಪಣ್ಣ, ಹಾಗೂ ವೀಲ್ಹ್ಚೇರ್ ಟೆನಿಸ್ ಆಟಗಾರ ಕೆ.ಗೋಪಿನಾಥ್, ಮತ್ತು ಮಾಜಿ ಅಂತಾರಾಷ್ಟ್ರೀಯ ಅಥ್ಲೀಟ್ ರೋಹಿತ್ ಕುಮಾರ್ ಕಟೀಲ್, ಕೊನೆಯದಾಗಿ ಕಬಡ್ಡಿ ಆಟಗಾರ ಎ.ನಾಗರಾಜ್ಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. * ರೋಹನ್ ಬೋಪಣ್ಣ 2017ರ ಫ್ರೆಂಚ್ ಓಪನ್ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು. * ಗೋಪಿನಾಥ್ ಅವರು 2013ರ ವರೆಗೂ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಆಟವಾಡುತ್ತಿದ್ದರು, ಇವರಿಗೆ ಅಪಘಾತದ ಬಳಿಕ ವೀಲ್ಹ್ಚೇರ್ ಟೆನಿಸ್ ಆಯ್ಕೆ ಮಾಡಿಕೊಂಡರು. * ರೋಹಿತ್ ಕುಮಾರ್ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೈಜಂಪ್ ಚಾಂಪಿಯನ್ ಆಗಿದ್ದರು, ಹಾಗೂ ಅಷ್ಟೇ ಅಲ್ಲದೇ ವಿಶ್ವ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಂಡಿರುವ ಭಾರತದ ಮೊದಲ ಹೈಜಂಪ್ ಪಟು ಇವರಿಗಿದ್ದಾರೆ. * ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರವು ದೇಶದ ಸೈನಿಕರ ಸೇವೆಯನ್ನು ಗುರುತಿಸಿ ಕ್ಯಾಪ್ಟನ್ ನವೀನ್ ನಾಗಪ್ಪ ಅವರಿಗೆ 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.