Job Description: * ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2021 ರ ನವೆಂಬರ್. 01 ಜನ ಸ್ಪಂದನ ವೆಬ್ ಪೋರ್ಟಲ್ ಉದ್ಘಾಟನೆ ಮಾಡಿ, ನಂತರ 1902 ಎಂಬ ಸಹಾಯವಾಣಿ ಉದ್ಘಾಟಿಸಿದರು, ಹಾಗೂ ಈ ಸಹಾಯವಾಣಿಗೆ ಕರೆ ಮಾಡಿ ಸಿಬ್ಬಂದಿ ಜತೆ ಫೋನ್'ನಲ್ಲಿ ಮಾಹಿತಿಯನ್ನು ಪಡೆದುಕೊಂಡರು. * ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಲ್ಲೇಶ್ವರಂ ಕ್ಷೇತ್ರದ ಎರಡು ರಸ್ತೆಗಳಲ್ಲಿ ಪ್ರಾಯೋಗಿಕ ಜನ ಸೇವಕ ಯೋಜನೆಗೆ ಚಾಲನೆ ನೀಡಿದರು, ಈ ಯೋಜನೆ ಮೂಲಕ ಸ್ಕೂಟರ್ ಬಳಸಿಕೊಂಡು ಮನೆ ಮನೆಗೆ ಈ ಯೋಜನೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. * ರಾಜ್ಯ ಸರ್ಕಾರವು ಈ ಜನ ಸೇವಕ ಯೋಜನೆ ಮೂಲಕ ಆಧಾರ್ ಕಾರ್ಡ್, ಆರೋಗ್ಯ ಕಾರ್ಡ್, ಉದ್ಯೋಗ ಕಾರ್ಡ್, ವಿಧವಾ ವೇತನ, ಪಹಣಿ, ಪಿಂಚಣಿಯನ್ನು ಜನರಿಗೆ ತಲುಪಿಸಲು ಒಂದು ಹೆಜ್ಜೆಯನ್ನು ಮುಂದೆ ಇಟ್ಟಿದೆ, ಜನೇವರಿ. 26ರಂದು ಗ್ರಾಮೀಣ ಪ್ರದೇಶಗಳಿಗೆ ಈ ಯೋಜನೆಯನ್ನು ವಿಸ್ತರಣೆ ಮಾಡಲಾಗುತ್ತದೆ. * ಈ ಜನ ಸೇವಕ ಯೋಜನೆ ಅಡಿಯಲ್ಲಿ 30 ಸೇವೆಗಳು ಲಭ್ಯವಾಗಲಿವೆ ಎಂದು ರಾಜ್ಯ ಸರ್ಕಾರವು ತಿಳಿಸಿದೆ.