Job Description: * ಪ್ರಸ್ತುತ ಆಸ್ಟ್ರೇಲಿಯಾ ಸರ್ಕಾರವು ಭಾರತದ ಕೋವಾಕ್ಸಿನ್ ಲಸಿಕೆಗೆ ಮಾನ್ಯತೆ ನೀಡಿದೆ, ಕೋವಾಕ್ಸಿನ್ ಲಸಿಕೆ ಪಡೆದಿರುವ ಭಾರತೀಯರು ಈ ಮಾನ್ಯತೆಯಿಂದ ಆಸ್ಟ್ರೇಲಿಯಾಗೆ ಪ್ರಯಾಣವನ್ನು ಬೆಳೆಸಬಹುದಾಗಿದೆ. * ಆಸ್ಟ್ರೇಲಿಯಾ ಸರ್ಕಾರವು ಈ ಮೊದಲೇ ಭಾರತದ ಕೋವಿಶೀಲ್ಡ್ ಲಸಿಕೆಗೆ ಮಾನ್ಯತೆ ನೀಡಿದೆ. * ಭಾರತ್ ಬಯೋಟೆಕ್ ಸಿದ್ಧಪಡಿಸಿರುವ ಈ ಕೋವಾಕ್ಸಿನ್ ಲಸಿಕೆಯನ್ನು ಜಾಗತಿಕ ಮಟ್ಟದ ಎಮರ್ಜೆನ್ಸಿ ಯೂಸ್ ಲಿಸ್ಟಿಂಗ್'ಗೆ ಸೇರ್ಪಡೆ ಮಾಡುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಅಂತಿಮ ಚರ್ಚೆಯನ್ನು ಮಾಡಲಿದೆ ಎಂದು ತಿಳಿದು ಬಂದಿದೆ. * ಆಸ್ಟ್ರೇಲಿಯಾ ಸರ್ಕಾರವು ಈ ಮೊದಲು ಸೀರಮ್ ಇನ್ಸ್ಟಿಟ್ಯೂಟ್ನ ಕೋವಿಶೀಲ್ಡ್ ಲಸಿಕೆ ಹಾಗೂ ಚೀನಾ ದೇಶದ ಸಿನೋವಾಕ್ಗೆ ಮಾನ್ಯತೆಯನ್ನು ನೀಡಿದೆ.