Job Description: * ಇದೀಗ ಪಂಜಾಬ್ ರಾಜ್ಯವು ಸಿಂಧೂ ನದಿಯಲ್ಲಿನ ಡಾಲ್ಫಿನ್ನ ಗಣತಿಯನ್ನು ಆರಂಭಿಸಲಿದೆ. * ವೈಜ್ಞಾನಿಕವಾಗಿ ಸಿಂಧೂ ನದಿಯಲ್ಲಿನ ಡಾಲ್ಫಿನ್'ನ್ನು ಪ್ಲಾಟಾನಿಸ್ಟಾ ಗ್ಯಾಂಟಿಕಾ ಮೈನರ್ ಎಂದು ಕರೆಯಲಾಗುತ್ತದೆ, ಹಾಗೂ ಬಿಯಾಸ್ ನದಿಯಲ್ಲಿ ಕಂಡುಬರುವ ಸಿಹಿನೀರಿನ ಡಾಲ್ಫಿನ್'ಗಳಾಗಿವೆ. * ಪಂಜಾಬ್ ರಾಜ್ಯದ ವನ್ಯಜೀವಿ ಸಂರಕ್ಷಣಾ ವಿಭಾಗವು ಡಾಲ್ಫಿನ್ಗಳು ಅಷ್ಟೇ ಅಲ್ಲದೇ ಅವುಗಳ ನೈಸರ್ಗಿಕ ಆವಾಸಸ್ಥಾನವನ್ನೂ ರಕ್ಷಿಸಲು ಮುಂದಾಗಿದೆ, ಹಾಗೂ ಮುಂದಿನ 5 ವರ್ಷಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದಿದ್ದಾರೆ. * ಇಂಡಸ್ ರಿವರ್ ಡಾಲ್ಫಿನ್'ನ್ನು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN)ನ ಪ್ರಕಾರ ಅಳಿವಿನಂಚಿನಲ್ಲಿವೆ ಎಂದು ತಿಳಿಸಲಾಗಿದೆ. * ಪಂಜಾಬ್ನ ರಾಜ್ಯ ಸರ್ಕಾರವು 2019 ರಲ್ಲಿ ಸಿಂಧೂ ನದಿಯ ಡಾಲ್ಫಿನ್'ನ್ನು ಪಂಜಾಬ್ನ ರಾಜ್ಯ ಜಲಚರ ಪ್ರಾಣಿ ಎಂದು ಘೋಷಣೆ ಮಾಡಿದೆ.