Job Description: * ಪ್ರಸ್ತುತ ಜಗತ್ತಿನ ಅನೇಕ ರಾಷ್ಟ್ರಗಳು ಎದುರಿಸುತ್ತಿರುವ ಕೋವಿಡ್-19 ಲಸಿಕೆಗಳ ಕೊರತೆಯನ್ನು ನೀಗಿಸಲು ಮುಂದಿನ ವರ್ಷದಲ್ಲಿ 500 ಕೋಟಿ ಡೋಸ್ ಲಸಿಕೆಗಳನ್ನು ಉಚಿತವಾಗಿ ವಿಸ್ತರಣೆ ಮಾಡಲು ಭಾರತ ಬದ್ಧವಾಗಿದೆ ಎಂದು ಮೋದಿ ತಿಳಿಸಿದ್ದಾರೆ. * ಪ್ರಧಾನಿ ಮೋದಿ ಅವರು ಇಟಲಿಯ ರೋಮ್ನಲ್ಲಿ ಜರುಗಿದ ಜಿ-20 ಶೃಂಗದ ಕೊನೆಯ ದಿನದ ಸಮ್ಮೇಳನದಲ್ಲಿ ಮಾತನಾಡಿದರು, ಈ ಕೋವಿಡ್-19 ಬಿಕ್ಕಟ್ಟು ನಿವಾರಣೆ ಮಾಡಲು ವರ್ಷಗಳೇ ಬೇಕಾಗುತ್ತದೆ, ಈ ಹಿನ್ನಲೆಯಿಂದಾಗಿ ಇದನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಎಲ್ಲ ರಾಷ್ಟ್ರಗಳ ಸಹಕಾರ ಬೇಕು, ಅಷ್ಟೇ ಅಲ್ಲದೇ 'ಒಂದು ವಿಶ್ವ- ಒಂದು ಆರೋಗ್ಯ' ಎಂಬ ಧ್ಯೇಯ ವ್ಯಾಕ್ಯದಡಿಯಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು. * ಪ್ರಸ್ತುತ ಭಾರತವು ಕೋವಿಡ್-19 ಸಂಧರ್ಭದಲ್ಲಿ ಜಗತ್ತಿನ 150 ರಾಷ್ಟ್ರಗಳಿಗೆ ಉಚಿತ ಔಷಧ ರವಾನಿಸಿದೆ. * ವಿಶ್ವಸಂಸ್ಥೆಯು ಸ್ಕಾಟ್ಲೆಂಡ್ನ ಗ್ಲಾಸ್ಗೋ ನಲ್ಲಿ ಆಯೋಜಿಸಿರುವ ಜಾಗತಿಕ ಪರಿಸರ ಸಮ್ಮೇಳನಕ್ಕೆ ಚಾಲನೆ ನೀಡಲಾಗಿದೆ, ಈ ಸಮ್ಮೇಳನದಲ್ಲಿ ಜಿ-20 ಸದಸ್ಯ ರಾಷ್ಟ್ರಗಳು ಹಾಗೂ ವಿಶ್ವದ ಅನೇಕ ರಾಷ್ಟ್ರಗಳು ಭಾಗಿಯಾಗಿದ್ದವು.