Job Description: * ಇತ್ತೀಚಿಗೆ ರೋಮ್'ನಲ್ಲಿ ಜರುಗಿದ ಜಿ-20 ದೇಶಗಳ ಮುಖಂಡರ ಶೃಂಗಸಭೆಯಲ್ಲಿ ಜಾಗತಿಕ ತಾಪಮಾನ ಹೆಚ್ಚಳವನ್ನು ಕಡಿಮೆ ಮಾಡುವ ಸಲುವಾಗಿ ಅರ್ಥಪೂರ್ಣ ಹಾಗೂ ಪರಿಣಾಮಕಾರಿ ಕ್ರಮಗಳಿಗೆ ಸಮ್ಮತಿಯನ್ನು ನೀಡಿದ್ದಾರೆ. * ಪ್ರಸ್ತುತ ಜಗತ್ತು ಹವಾಮಾನ ದುರಂತದತ್ತ ಅತಿ ವೇಗದಿಂದ ಓಡುತ್ತಿದೆ ಎಂದು ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಅವರು ಎಚ್ಚರಿಕೆಯನ್ನು ನೀಡಿದ್ದಾರೆ. * ಜಿ20 ನಾಯಕರು ಜಾಗತಿಕ ತಾಪಮಾನದ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ಗೆ ಮಿತಿಗೊಳಿಸಬೇಕು ಎಂಬ ವಿಚಾರಕ್ಕೆ ಸಮ್ಮತಿಯನ್ನು ನೀಡಿದ್ದಾರೆ, ಅಷ್ಟೇ ಅಲ್ಲದೇ ಬರಗಾಲ, ಪ್ರವಾಹ, ಬಿರುಗಾಳಿಯಂತಹ ನೈಸರ್ಗಿಕ ವಿಕೋಪಗಳನ್ನು ತಡೆಯುವದು ಅನಿವಾರ್ಯವಾಗಿದೆ ಎಂದು ವಿಶ್ವ ಸಂಸ್ಥೆಯು ತಿಳಿಸಿದೆ, ಒಟ್ಟು ಇಂಗಾಲ ಹೊರಸೂಸುವಿಕೆಯಲ್ಲಿ ಜಿ20 ದೇಶಗಳ ಪಾಲು ಶೇ 80 ರಷ್ಟಿದೆ. * ಪ್ರಸ್ತುತ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ, 1.5 ಡಿ.ಸೆ ಗುರಿಯನ್ನು ಸಾಧಿಸುವುದು ಎಂದರೆ, 2030ರ ವೇಳೆಗೆ ಜಾಗತಿಕ ಇಂಗಾಲದ ಹೊರಸೂಸುವಿಕೆಯನ್ನು ಶೇ 50ರಷ್ಟು ಕಡಿಮೆ ಮಾಡುವದು ಮತ್ತು 2050ರ ವೇಳೆ 'ನೆಟ್ ಜೀರೊ' ಗುರಿ ಸಾಧಿಸುವದು ಎಂದರ್ಥ.