Job Description: * ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಗರದ 18 ಕೆರೆಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಏಳು ಕೆರೆಗಳ ಕಾಮಗಾರಿಯನ್ನು ಆರಂಭಿಸಿದ್ದಕ್ಕಾಗಿ ಅರ್ಥ್ ಡೇ ನೆಟ್ವರ್ಕ್ ನ 'ಸ್ಟಾರ್ ಮುನ್ಸಿಪಲ್ ಪ್ರಶಸ್ತಿ' ಸ್ವೀಕರಿಸಿದೆ. ಅರ್ಥ್ ಡೇ ನೆಟ್ವರ್ಕ್-ಇಂಡಿಯಾ ಇದು ಒಂದು ಪರಿಸರ ಸಂಸ್ಥೆಯಾಗಿದೆ. * ಅರ್ಥ್ ಡೇ ನೆಟ್ವರ್ಕ್ನ ಹಿರಿಯ ವ್ಯವಸ್ಥಾಪಕಿ, ನೀಲಾ ಮಜುಂದಾರ್ ಮತ್ತು ಪುಟ್ಟೇನಹಳ್ಳಿ ನೈಬರ್ಹುಡ್ ಲೇಕ್ ಇಂಪ್ರೂವ್ಮೆಂಟ್ ಟ್ರಸ್ಟ್ ಅಧ್ಯಕ್ಷೆ ಉಷಾ ರಾಜಗೋಪಾಲನ್ ರವರು, BBMP ಮುಖ್ಯ ಆಯುಕ್ತ ಗೌರವ್ ಗುಪ್ತ ರವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು. * ಇದೆ ಸಂದರ್ಭದಲ್ಲಿ ಪುಟ್ಟೇನಹಳ್ಳಿಯ ನೈಬರ್ಹುಡ್ ಲೇಕ್ ಇಂಪ್ರೂವ್ಮೆಂಟ್ ಟ್ರಸ್ಟ್ನಿಂದ ನಾಗರಿಕ ಸಂಸ್ಥೆಯನ್ನು ನಾಮನಿರ್ದೇಶನ ಮಾಡಲಾಗಿದೆ. * BBMP ಯೊಂದಿಗೆ 2009 ರಲ್ಲಿ ನಮ್ಮ ಪಾಲುದಾರಿಕೆ ಪ್ರಾರಂಭವಾಯಿತು ಎಂದು PNLIT ಟ್ರಸ್ಟ್ನ ಅಧ್ಯಕ್ಷೆ ಉಷಾ ರಾಜಗೋಪಾಲ್ ಅವರು BBMP ಯನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ನಮಗೆ ಅತ್ಯಂತ ಸಂತೋಷವೆನಿಸುತ್ತದೆ ಎಂದು ತಿಳಿಸಿದರು.