Job Description: * ಪ್ರಸ್ತುತ ಸುಮಾರು 4.7 ಕೋಟಿ ಗ್ರಾಹಕರಿಗೆ ಗೃಹ ಸಾಲವನ್ನು ನೀಡಲು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಮತ್ತು HDFC ಬ್ಯಾಂಕ್ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿವೆ. * ಇದೀಗ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ದೇಶಾದ್ಯಂತದ ಸುಮಾರು 650 ಶಾಖೆಗಳು ಹಾಗೂ 1,36,000 ಕ್ಕೂ ಅಧಿಕ ಬ್ಯಾಂಕಿಂಗ್ ಪೋಸ್ಟ್ ಆಫೀಸ್ಗಳ ನೆಟ್ವರ್ಕ್'ನ್ನು ನಿಯಂತ್ರಿಸುತ್ತಿದೆ, ಅಷ್ಟೇ ಅಲ್ಲದೇ ಭಾರತದಲ್ಲಿನ ಗ್ರಾಹಕರಿಗೆ HDFC'ಯ ಗೃಹ ಸಾಲ ಸಿಗುವಂತೆ ಮಾಡುವ ಗುರಿಯನ್ನು ಹೊಂದಿದೆ. * ಪ್ರಸ್ತುತ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸುಮಾರು 1,90,000 ಬ್ಯಾಂಕಿಂಗ್ ಸೇವೆಯನ್ನು ಒದಗಿಸುತ್ತಿದೆ, ಅದು ಪೋಸ್ಟ್ಮೆನ್ ಮತ್ತು ಗ್ರಾಮೀಣ ಡಾಕ್ ಸೇವಕರ ಮೂಲಕ ವಸತಿ ಸಾಲವನ್ನು ನೀಡಲಾಗುತ್ತದೆ ಎಂದು ತಿಳಿಸಿದೆ. * ಈ HDFC ಮತ್ತು IPPB'ನ ಪಾಲುದಾರಿಕೆಯು ಡಿಜಿಟಲ್ ಆಗಿ ಸಕ್ರಿಯಗೊಳಿಸಲಾದ ಏಜೆಂಟ್ ಬ್ಯಾಂಕಿಂಗ್ ಚಾನೆಲ್ ಮೂಲಕ ವಸತಿ ಸಾಲಗಳನ್ನು ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದಿದೆ. * ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB): ಇದೊಂದು ಭಾರತೀಯ ಅಂಚೆಯ ವಿಶೇಷ ವಿಭಾಗವಾಗಿದೆ, ಇದು ಅಂಚೆ ಇಲಾಖೆಯ ಅಧಿಕಾರ ವ್ಯಾಪ್ತಿಯಲ್ಲಿ ತನ್ನ ಕಾರ್ಯನಿರ್ವಹಿಸುತ್ತದೆ. * ಪ್ರಸ್ತುತ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್'ನ್ನು 2018 ರಲ್ಲಿ ಆರಂಭಿಸಲಾಗಿದೆ.