Job Description: * ಇತ್ತೀಚಿಗೆ ಕೆನಡಾ ದೇಶದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ತಮ್ಮ ಕ್ಯಾಬಿನೆಟ್'ನ್ನು ಪುನಃ ರಚಿಸಿದರು, ಅದರಲ್ಲಿ ಭಾರತೀಯ ಮೂಲದ ಅನಿತಾ ಆನಂದ್ ಅವರು ಕೆನಡಾದ ರಕ್ಷಣಾ ಸಚಿವರಾಗಿ ನೇಮಕವಾಗಿದ್ದಾರೆ. * ಪ್ರಸ್ತುತ ಸಾರ್ವಜನಿಕ ಹಾಗೂ ರಾಜಕೀಯ ನಾಯಕರು ಕೆನಡಾ ದೇಶದ ಮಿಲಿಟರಿಯ ಮೇಲೆ ತನ್ನ ಸಂಸ್ಕೃತಿಯನ್ನು ಬದಲಾವಣೆ ಮಾಡಲು ಹಾಗೂ ಲೈಂಗಿಕ ದುರುಪಯೋಗದ ಆರೋಪಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. * ಈ ಮೊದಲು ಭಾರತೀಯ ಮೂಲದ ಹರ್ಜಿತ್ ಸಜ್ಜನ್ ಅವರು ದೀರ್ಘಾವಧಿಯ ರಕ್ಷಣಾ ಸಚಿವರಾಗಿದ್ದರು, ಇದೀಗ ಅನಿತಾ ಆನಂದ್ ಅವರು ಕೆನಡಾದ ರಕ್ಷಣಾ ಸಚಿವರಾಗಿದ್ದಾರೆ.