Job Description: * ಪ್ರಸ್ತುತ ನವದೆಹಲಿಯಲ್ಲಿ ಭಾರತ ಮತ್ತು ಕಿರ್ಗಿಸ್ತಾನ್ ದೇಶಗಳು ಮೊದಲ ಕಾರ್ಯತಂತ್ರದ ಮಾತುಕತೆಯನ್ನು ನಡೆಸಿದವು. * ಉಭಯ ದೇಶಗಳು ಭದ್ರತೆ ಮತ್ತು ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಶೃಂಗಸಭೆಯಲ್ಲಿ ಪರಸ್ಪರ ಒಪ್ಪಿಗೆಯನ್ನು ನೀಡಿವೆ. * ಸದ್ಯ ಅಫ್ಘಾನಿಸ್ತಾನದಲ್ಲಿ ಇರುವಂತಹ ಪರಿಸ್ಥಿತಿಯಿಂದ ಭಾರತ ಹಾಗೂ ಕಿರ್ಗಿಸ್ತಾನ್ ದೇಶಗಳು ಬೆದರಿಕೆಎದುರಿಸುತ್ತಿವೆ ಎಂದು ತಿಳಿದು ಬಂದಿದೆ. * ಭಾರತ ಹಾಗೂ ಕಿರ್ಗಿಸ್ತಾನ್ ದೇಶಗಳು ಭಯೋತ್ಪಾದನೆ ನಿಗ್ರಹ, ಮಾದಕ ದ್ರವ್ಯ ನಿಯಂತ್ರಣದ ವಿರುದ್ಧ ಹೋರಾಟ ಹಾಗೂ ರಕ್ಷಣಾ ವ್ಯಸ್ಥೆಗೆ ಸಂಬಂಧ ಪಟ್ಟಿರುವ ದ್ವಿಪಕ್ಷೀಯ ಭದ್ರತಾ ಸಹಕಾರವನ್ನು ಹೆಚ್ಚಿಸುವ ಕ್ರಮಗಳನ್ನು ಪರಸ್ಪರ ಚರ್ಚಿಸಿದರು. * ಕಿರ್ಗಿಸ್ತಾನ್ 1991 ರ ಆಗಸ್ಟ್. 31 ರಂದು ಸ್ವಾತಂತ್ರ್ಯವನ್ನು ಪಡೆದುಕೊಂಡಿತು, ಇದಾದ ನಂತರ ಭಾರತವು 1992 ರಲ್ಲಿ ಕಿರ್ಗಿಸ್ತಾನ್ ದೇಶದ ಜೊತೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪನೆ ಮಾಡಿತು, ಮತ್ತೇ 1994 ರಲ್ಲಿ ಭಾರತವು ರೆಸಿಡೆಂಟ್ ಮಿಷನ್'ನ್ನು ಸ್ಥಾಪನೆ ಮಾಡಿತು.