Job Description: * ಪ್ರಸ್ತುತ ದೆಹಲಿ ಸರ್ಕಾರವು ಹಿರಿಯ ನಾಗರಿಕರಿಗಾಗಿ 'ಉಚಿತ ತೀರ್ಥಯಾತ್ರೆ' ಯೋಜನೆ ರೂಪಿಸಿದೆ, ಇದೀಗ ಆ ಯೋಜನೆಗೆ ಅಯೋಧ್ಯೆ ಯಾತ್ರೆಯನ್ನು ಕೂಡ ಸೇರಿಸಲು ದೆಹಲಿ ಸರ್ಕಾರದ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. * ಇದೀಗ ಹಿರಿಯ ನಾಗರಿಕರಿಗಾಗಿ ದೆಹಲಿ ಸರ್ಕಾರವು 'ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆ'ಯನ್ನು ಆರಂಭಿಸಿದೆ, ಹಿರಿಯ ನಾಗರಿಕರು ಈ ಯೋಜನೆಯ ಅಡಿಯಲ್ಲಿ ಪುರಿ ಜಗನ್ನಾಥ, ರಾಮೇಶ್ವರಂ, ಶಿರಡಿ, ಮಥುರಾ, ಹರಿದ್ವಾರ, ತಿರುಪತಿ ಹೀಗೆ ಹಲವು ಬೇರೆ ಬೇರೆ ಯಾತ್ರಾ ಸ್ಥಳಗಳಿಗೆ ಪ್ರಯಾಣ ಬೆಳಸುವ ಪ್ರವಾಸದ ವೆಚ್ಚವನ್ನು ಸರ್ಕಾರ ಭರಿಸಲಿದೆ. * ಪ್ರಸ್ತುತ ಇದೀಗ 35 ಸಾವಿರ ಹಿರಿಯ ನಾಗರಿಕರು ದೆಹಲಿ ಸರ್ಕಾರದ ಈ ಯೋಜನೆ ಅಡಿಯಲ್ಲಿ ಉಚಿತ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ, ಇತ್ತೀಚಿಗೆ ಈ ಯೋಜನೆಯು ಕೋವಿಡ್-19 ಹಿನ್ನಲೆಯಿಂದಾಗಿ ಸ್ಥಗಿತವಾಗಿತ್ತು, ಇದೀಗ ದೆಹಲಿ ಸರ್ಕಾರವು ಈ ಯೋಜನೆನ್ನು ಆರಂಭಕ್ಕೆ ಸೂಚನೆಯನ್ನು ನೀಡಿದೆ.