Job Description: * ಪ್ರಸ್ತುತ 2021'ರ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಹಾಗೂ ಬೆಳ್ಳಿ ಪದಕ ವಿಜೇತ ಕುಸ್ತಿಪಟು ರವಿ ದಹಿಯಾ ಸೇರಿ ಒಟ್ಟು 11 ಕ್ರೀಡಾಪಟುಗಳನ್ನು 2021ನೇ ಸಾಲಿನ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿದು ಬಂದಿದೆ. * ಖೇಲ್ ರತ್ನ ಪ್ರಶಸ್ತಿಗೆ 5 ಪ್ಯಾರಾ ಅಥ್ಲೀಟ್'ಗಳು ನಾಮನಿರ್ದೇಶನವಾಗಿದ್ದಾರೆ, ಅಷ್ಟೇ ಅಲ್ಲದೇ ಅರ್ಜುನ ಪ್ರಶಸ್ತಿಗೆ 35 ಕ್ರೀಡಾಪಟುಗಳು ನಾಮನಿರ್ದೇಶನವಾಗಿದ್ದಾರೆ ಎಂದು ತಿಳಿದು ಬಂದಿದೆ. * ಖೇಲ್ ರತ್ನ ಪ್ರಶಸ್ತಿಯನ್ನು ಅಧಿಕೃತವಾಗಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುತ್ತದೆ, ಇದನ್ನು ಈ ಮೊದಲು ಕ್ರೀಡೆ ಮತ್ತು ಆಟಗಳಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುತ್ತಿತ್ತು, ಪ್ರಸ್ತುತ ಈ ಪ್ರಶಸ್ತಿಯು ಭಾರತದ ಅತ್ಯುನ್ನತ ಕ್ರೀಡಾ ಗೌರವವಾಗಿದೆ. * ಈ ಪ್ರಶಸ್ತಿಯುನ್ನು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ವಾರ್ಷಿಕವಾಗಿ ನೀಡಲಾಗುತ್ತದೆ. * ಖೇಲ್ ರತ್ನ ಪ್ರಶಸ್ತಿ ಅಥವಾ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು 1992 ಸ್ಥಾಪನೆ ಮಾಡಿದ್ದಾರೆ.