Job Description: * ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಯಾಗಿರುವ ರಿಲಯನ್ಸ್ ಕಮ್ಯುನಿಕೇಷನ್ಸ್ ನ ಜಿಯೊ ಹಾಗೂ ಗೂಗಲ್ ಸಂಸ್ಥೆಗಳು ಜಂಟಿಯಾಗಿ ನೂತನ ಮೊಬೈಲ್ ಆಪರೇಟಿಂಗ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸುತ್ತಿವೆ, ಹಾಗೂ ಇದಕ್ಕೆ "ಪ್ರಗತಿ" ಎಂದು ಹೆಸರಿಸಲಾಗಿದೆ. * ಈ ಹೊಸ ಜಿಯೊ ಫೋನ್ ದೀಪಾವಳಿ ವೇಳೆಗೆ ಮಾರುಕಟ್ಟೆಗೆ ಬರಲು ಸಜ್ಜಾಗುತ್ತಿದೆ ಎಂದು ಭಾರತೀಯ ಮೂಲದ ಗೂಗಲ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ. * ನೂತನವಾಗಿ ಬಿಡುಗಡೆಯಾಗಲಿರುವ ಜಿಯೊ ಫೋನ್ ನೆಕ್ಸ್ಟ್ ಮೊಬೈಲ್ ಫೋನಿನಲ್ಲಿ ಒಟ್ಟು 10 ಪ್ರಾದೇಶಿಕ ಭಾಷೆಗಳ ಭಾಷಾಂತರ ಸವಲತ್ತು ಕಾರ್ಯವನ್ನು ಅಳವಡಿಸಲಾಗಿದೆ. ಇದರ ಸಹಾಯದಿಂದ ಭಾರತದ ಪ್ರಾದೇಶಿಕ ಭಾಷೆಯ ಜನರು ಸುಲಭವಾಗಿ ಮೊಬೈಲ್ ಅನ್ನು ಬಳಸಲು ಸಹಾಯವಾಗುವುದು ಎಂದು ಅವರು ತಿಳಿಸಿದ್ದಾರೆ.