Job Description: * ಪ್ರಸ್ತುತ ಸೌದಿ ಅರೇಬಿಯಾ ಮುಂಬರುವ ದಶಕದಲ್ಲಿ ಯೋಜನೆಗಳಲ್ಲಿ ಸುಮಾರು 200 ಬಿಲಿಯನ್ ರಿಯಾಲ್ಗಳನ್ನು ಹೂಡಿಕೆ ಮಾಡುವ ಸಲುವಾಗಿ 'ರಾಷ್ಟ್ರೀಯ ಮೂಲಸೌಕರ್ಯ ನಿಧಿ'ಯನ್ನು ಆರಂಭಿಸಿದೆ. * ಸೌದಿ ಅರೇಬಿಯಾ ಆರಂಭಿಸಿರುವ ಈ ರಾಷ್ಟ್ರೀಯ ಮೂಲಸೌಕರ್ಯ ನಿಧಿಯು ನೀರು, ಸಾರಿಗೆ, ಇಂಧನ, ಶಿಕ್ಷಣ, ಆರೋಗ್ಯ, ಡಿಜಿಟಲ್ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡಲಿದೆ, ಹಾಗೂ ಈ ನಿಧಿಯು ಖಾಸಗೀಕರಣವಾಗಿರುವ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸಿನ ಸಹಾಯವನ್ನು ನೀಡಲಿದೆ ಹಾಗೂ ಹೂಡಿಕೆಗಳಿಗೆ ಅವಕಾಶಗಳನ್ನು ಒದಗಿಸಲಿದೆ, ಜೊತೆಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ. * ರಾಷ್ಟ್ರೀಯ ಮೂಲಸೌಕರ್ಯ ನಿಧಿಯನ್ನು ರಾಷ್ಟ್ರೀಯ ಅಭಿವೃದ್ಧಿ ನಿಧಿ (NDF) ಆರಂಭಿಸಿದೆ, 11 ಅಭಿವೃದ್ಧಿ ನಿಧಿಗಳು ಹಾಗೂ ಬ್ಯಾಂಕ್ಗಳನ್ನು ಸೇರಿರುವ ವ್ಯವಸ್ಥೆಯನ್ನು NDF ಈ ನಿಧಿಯನ್ನು ನಿರ್ವಹಣೆ ಮಾಡಲಿದೆ. * ಈ ಹಿಂದೆ 2017 ರಲ್ಲಿ ಸೌದಿ ಅರೇಬಿಯಾ ಅಭಿವೃದ್ಧಿ ನಿಧಿಗಳು ಹಾಗೂ ಬ್ಯಾಂಕ್ಗಳ ಕಾರ್ಯಕ್ಷಮತೆಯನ್ನು ವೃದ್ಧಿಸಲು ಈ ನಿಧಿಯನ್ನು ಸ್ಥಾಪನೆ ಮಾಡಲಾಗಿದೆ.