Job Description: * ಪ್ರಸ್ತುತ ಭಾರತ ಹಾಗೂ ಸ್ವೀಡನ್ ದೇಶಗಳು ಅಕ್ಟೋಬರ್. 26 ರಂದು 8 ನೇ ಆವಿಷ್ಕಾರ ದಿನವನ್ನು ಆಚರಣೆ ಮಾಡಿದವು, ಅಷ್ಟೇ ಅಲ್ಲದೇ ಇದೇ ಸಂಧರ್ಭದಲ್ಲಿ ವರ್ಚುಲ್ ಸಭೆಯ ಮೂಲಕ ಈ ರಾಷ್ಟಗಳು ಹವಾಮಾನ ಬದಲಾವಣೆಯ ಹಾಗೂ ಹಸಿರು ಪರಿವರ್ತನೆಯನ್ನು ತರಲು ಅಗತ್ಯವಿರುವ ಪರಿಹಾರಗಳ ಮಾಹಿತಿಯನ್ನು ಚರ್ಚಿಸಿದರು. * ಉಭಯ ದೇಶಗಳು ಈ ಅಧಿವೇಶನದಲ್ಲಿ ಹವಾಮಾನ ಸ್ನೇಹಿ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಡಿಜಿಟಲ್ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯನ್ನು ಅಳವಡಿಕೆ ಮಾಡುವ ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದಾರೆ. * ಎರಡು ದೇಶಗಳು ಈ ಆನ್ಲೈನ್ ಈವೆಂಟ್'ನ್ನು 'ಭಾರತ ಸ್ವೀಡನ್ನ ಹಸಿರು ಪರಿವರ್ತನೆಯನ್ನು ವೇಗಗೊಳಿಸುವುದು' ಎಂಬ ವಿಷಯದ ಅಡಿಯಲ್ಲಿ ನಿಯೋಜಿಸಲಾಗಿದೆ. * ಈ ಹಿಂದೆ 1947 ರಲ್ಲಿ ಯುನೈಟೆಡ್ ಕಿಂಗ್ಡಮ್ನಿಂದ ಭಾರತದ ಸ್ವಾತಂತ್ರ್ಯವನ್ನು ಗುರುತಿಸಿದ ದೇಶಗಳಲ್ಲಿ ಸ್ವೀಡನ್ ದೇಶವು ಒಂದಾಗಿದೆ, ಈ ಎರಡು ದೇಶಗಳು 1949 ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪನೆ ಮಾಡಿಕೊಂಡವು. * ಪ್ರಸ್ತುತ ಭಾರತ ದೇಶವು ಸ್ಟಾಕ್ಹೋಮ್ನಲ್ಲಿ ರಾಯಭಾರ ಕಚೇರಿಯನ್ನು ನಿರ್ಮಿಸಿದೆ, ಹಾಗೂ ಸ್ವೀಡನ್ ದೇಶವು ನವದೆಹಲಿಯಲ್ಲಿ ರಾಯಭಾರ ಕಚೇರಿಯನ್ನು ಸ್ಥಾಪಿಸಿದೆ.