Job Description: * ಪ್ರಸ್ತುತ ಕೇರಳ ರಾಜ್ಯವು 'ಅತ್ಯಂತ ಸುಸ್ಥಿರ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ನಗರ ' ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ರಾಜ್ಯದ ಸಾರಿಗೆ ಸಚಿವ ಆಯಂಟನಿ ರಾಜು ಅವರು ಹೇಳಿದ್ದಾರೆ. * ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ ಸಿಂಗ್ ಪುರಿ ಅವರು ಈ ಪ್ರಶಸ್ತಿಯನ್ನು ಇದೇ ಅಕ್ಟೋಬರ್. 29ರಂದು ದೆಹಲಿಯಲ್ಲಿ ಪ್ರದಾನ ಮಾಡಲಿದ್ದಾರೆ. * ಕೇರಳ ಕೊಚ್ಚಿ ನಗರದಲ್ಲಿ ಸಾರಿಗೆ ಸೌಲಭ್ಯಗಳನ್ನು ವೃದ್ಧಿಸಲು ಜಾರಿಗೆ ತರಲಾಗಿರುವ ಕೊಚ್ಚಿ ಮೆಟ್ರೊ,ವಾಟರ್ ಮೆಟ್ರೊ ಹಾಗೂ ಇ-ಮೊಬಿಲಿಟಿ ತರಹದ ಯೋಜನೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ, ಪ್ರಸ್ತುತ ಕೊಚ್ಚಿ ಓಪನ್ ಮೊಬಿಲಿಟಿ ನೆಟ್ವರ್ಕ್ನ ರಚನೆಯೂ ಪ್ರಶಸ್ತಿಯನ್ನು ಪಡೆಯಲು ಸಹಾಯವಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ದೇಶದ ಬೇರೆ ಬೇರೆ ರಾಜ್ಯಗಳು ಹಾಗೂ ಕೇಂದ್ರ ಆಡಳಿತ ಪ್ರದೇಶಗಳಲ್ಲಿನ ಸಾರಿಗೆ ಸೌಲಭ್ಯಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.