Job Description: * ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಷನ್ (NSDC) 'ಸ್ಕಿಲ್ ಇಂಪ್ಯಾಕ್ಟ್ ಬಾಂಡ್' ಒಂದನ್ನು ಬಿಡುಗಡೆ ಮಾಡಿದೆ. * ಇದನ್ನು ಜಾಗತಿಕ ಪಾಲುದಾರರ ಸಹಯೋಗದೊಂದಿಗೆ ಭಾರತದಲ್ಲಿ ಕೌಶಲ್ಯಕ್ಕಾಗಿ ಮೊದಲ ಬಾರಿಗೆ ಅತಿದೊಡ್ಡ ಪ್ರಮಾಣದಲ್ಲಿ ಸ್ಥಾಪಿಸಲಾಗುತ್ತಿದೆ * 'ಸ್ಕಿಲ್ ಇಂಪ್ಯಾಕ್ಟ್ ಬಾಂಡ್' ಒಕ್ಕೂಟವು 14.4 ಮಿಲಿಯನ್ ಡಾಲರ್ ನಿಧಿಯನ್ನು ಸಂಗ್ರಹಿಸಿದೆ, ಇದರಿಂದ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ 50,000 ಯುವಕರಿಗೆ ಅನುಕೂಲ ಕೆಲ್ಪಿಸಿದಂತಾಗುತ್ತದೆ. * ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಶೇಕಡ 60 ರಷ್ಟು ಸೌಲಭ್ಯ ನೀಡುವ ಗುರಿಯನ್ನು ಇಟ್ಟುಕೊಂಡಿದೆ ಇದರಿಂದ ವಿಶೇಷವಾಗಿ ಮಹಿಳೆಯರ ಜೀವನದಲ್ಲಿ ಪರಿವರ್ತನೆಯ ಪ್ರಭಾವವನ್ನು ಬೀರುವ ಸಾಮರ್ಥ್ಯವನ್ನು ಹೊಂದಿದೆ ಎಂದು NSDC ಅಧ್ಯಕ್ಷ ಎ.ಎಂ. ನಾಯಕ್ ಹೇಳಿದರು.