Job Description: * ಕರ್ನಾಟಕ ರಾಜ್ಯ ಸರ್ಕಾರದ ಆದೇಶದ ಮೇರೆಗೆ 'ಅನುಗ್ರಹ' ಯೋಜನೆ ಮುಂದುವರೆದಿದೆ, ಈ ಯೋಜನೆ ಅಡಿಯಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡುವ ಯೋಜನೆ ಇದಾಗಿದೆ, ಇದೀಗ ಈ ಯೋಜನೆಯನ್ನು ಮುಂದುವರಿಸಲು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ ಎಂದು ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ. * ಈ 'ಅನುಗ್ರಹ' ಯೋಜನೆ ಅಡಿಯಲ್ಲಿ ಆಕಸ್ಮಿಕವಾಗಿ ಮೃತಪಟ ಕುರಿಗಳಿಗೆ 5 ಸಾವಿರ ರೂ. ಮತ್ತು ಕುರಿ ಮರಿಗಳಿಗೆ 2,500 ರೂ. ಹಾಗೂ ದನಗಳಿಗೆ 10 ಸಾವಿರ ರೂ. ಒದಗಿಸಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.