Job Description: * ವಿಶ್ವಸಂಸ್ಥೆಯ ದಿನವನ್ನು 1948 ರಿಂದ ಪ್ರತಿ ವರ್ಷವು ಅಕ್ಟೋಬರ್. 24 ರಂದು ಆಚರಣೆ ಮಾಡಲಾಗುತ್ತದೆ. * ಈ ವಿಶ್ವಸಂಸ್ಥೆಯ ದಿನವು 1945 ರಲ್ಲಿ ಯುಎನ್ ಚಾರ್ಟರ್ ಜಾರಿಗೆ ಬಂದ ವಾರ್ಷಿಕೋತ್ಸವವನ್ನು ತೋರಿಸುತ್ತದೆ. * ಯುಎನ್ ಚಾರ್ಟರ್ ಇದೊಂದು ವಿಶ್ವಸಂಸ್ಥೆಯ ಸ್ಥಾಪಕ ದಾಖಲೆಯಾಗಿದೆ, ಇದು ಜಾಗತಿಕ ಸಮಾನತೆ ಮತ್ತು ಶಾಂತಿಯುತೆಗಾಗಿ ಕಾರ್ಯ ನಿರ್ವಹಿಸುತ್ತದೆ, ವಿಶ್ವಸಂಸ್ಥೆಯನ್ನು ಅಧಿಕೃತವಾಗಿ 1945 ರಲ್ಲಿ ಸ್ಥಾಪನೆ ಮಾಡಲಾಗಿದೆ. * 1948 ರಿಂದ ಅಕ್ಟೋಬರ್ 24 ವಿಶ್ವಸಂಸ್ಥೆಯ ದಿನವನ್ನು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ಶಿಫಾರಸ್ತಿನ ಮೇರೆಗೆ ಸದಸ್ಯ ರಾಷ್ಟ್ರಗಳು ಈ ದಿನವನ್ನು ಸಾರ್ವಜನಿಕ ರಜಾದಿನವಾಗಿ ಆಚರಿಸುತ್ತವೆ. * ಯುಎನ್ ಚಾರ್ಟರ್ ನ್ನು ಚೀನಾ, ಸೋವಿಯತ್ ಯೂನಿಯನ್, ಫ್ರಾನ್ಸ್, ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್ಡಮ್ ಮತ್ತು ಇತರ ಸಹಿ ಮಾಡಿದ ರಾಷ್ಟ್ರಗಳು ಅನುಮೋದಿಸಿದ ನಂತರ ಅಂದರೆ 1945 ರ ಅಕ್ಟೋಬರ್. 24 ರಂದು ವಿಶ್ವಸಂಸ್ಥೆಯನ್ನು ಅಧಿಕೃತವಾಗಿ ಸ್ಥಾಪನೆ ಮಾಡಲಾಗಿದೆ. * ಯುನೈಟೆಡ್ ಸ್ಟೇಟ್ಸ್ನ ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಅವರು ಈ 'ವಿಶ್ವಸಂಸ್ಥೆ' ಎಂಬ ಹೆಸರನ್ನು ರಚಿಸಿದ್ದಾರೆ. * ಪ್ರಸ್ತುತ ವಿಶ್ವಸಂಸ್ಥೆಯಲ್ಲಿ 193 ಸದಸ್ಯ ರಾಷ್ಟ್ರಗಳಿವೆ ಮತ್ತು ಅವುಗಳಲ್ಲಿ ಪ್ರತಿ ರಾಷ್ಟ್ರವು UN ಜನರಲ್ ಅಸೆಂಬ್ಲಿಯ ಸದಸ್ಯ ರಾಷ್ಟ್ರಗಳಾಗಿವೆ.